ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ ಪೀತಾಂಬರವನೆ ಹೊದ್ದಿಸೀ | ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ 1 ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ ಸಂತುಷ್ಟಿಯಿಲ್ಲವಲ್ಲಾ ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ ಒಡೆಯನೆಂಬಿರಿ ಪರಲೋಕದಾನಂದಕ್ಕೆ ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ 2 ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ3 ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ ನ[ವಂ] ಮಹೀಭಾರವ ತವಿಸಲೆಂದವÀತರಿಸೆ ಜನನವಂ ಪಡೆದ ತಂದೆಯಂ ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ4 ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ 5
--------------
ಬೇಲೂರು ವೈಕುಂಠದಾಸರು