ಮೃಡ ಫಣೀಂದ್ರವೀಂದ್ರ ವಂದ್ಯ
ಕಡಲಶಯನ ಶ್ರೀನಿವಾಸ ಒಡೆಯನಾಜ್ಞೆಯಿಂದಲೆನಗೆ ಪ.
ಜೀವಗಣಪತೆ ಸರ್ವದೇವತಾಗತೆ
ಪಾವನಾತ್ಮ ಪದ್ಮ ಸಮಕರಾವಲಂಬಿತ್ತು ಬೇಗ 1
ಮೂರು ತಾಪವಾ ಹತ್ರ ಸೇರದಂದದಿ ಅದರ
ಬೇರ ಕಡಿದು ಭಕ್ತಿಸಾರ ಧಾರದಿಂದ ದೃಢವ ಮಾಡಿ 2
ಕೈಟಭಾರಿಯ ಪುರದ ಭಾಟದಾರಿಯ
ಬೇಟ ಜಲಟ ಕುಕ್ಕುಟಗಳ ನೋಟಾಪಾಟದೊಡನೆ ತೋರಿ 3
ಹರಿಯ ದೊರೆತನ ಕರುಣಿಕಾಗ್ರಣಿ
ಕಮಲ ಕರವ ಎನ್ನ ಶಿರದೊಳಿಕ್ಕಿ 4
ನಿನ್ನ ಕರುಣವು ನಿಯತವಾಗಲು
ಪನ್ನಗಾಚಲೇಂದ್ರ ದಯದಿ ತನ್ನ ದಾಸನೆಂದು ಕಾವ 5