ಗೌರೀಪ್ರಿಯ ಹರ ಗೌರೀಪ್ರೀಯ ಹರ
ಗೌರೀಪ್ರಿಯ ಹರ ಗಂಗಾಧರ ಪ
ನಿತ್ಯ ನಿರಾಮಯ
ಪರ ಸ್ವಪ್ರಕಾಶ 1
ನಿರ್ಮಿತಚಿಚ್ಛಕ್ತಿ ಪರಿಣಾಮಬ್ರಹ್ಮಾಂಡ
ನಿರ್ಮಲ ನಿಗಮಾಂತವೇದ್ಯ ಸ್ವಸಾಧ್ಯ 2
ಬಾಲೇಂದುಶೇಖರ ಭಕ್ತ ದುರಿತಹರ
ಫಾಲಾಕ್ಷ ಫಣಿಹಾರಯುಕ್ತಶರೀರ 3
ಇನಕೋಟಿಸಂಕಾಶ ಕನಕಕುಂಡಲ ದೇವ
ವಿನುತ ವಿರೂಪಾಕ್ಷ ವಿಬುಧೌಘ ಪಕ್ಷ 4
ದುರಿತ ದಿವಾಕರ
ಭವ ಭಯ ಪರಿಹರ ಭವದೂರ ಧೀರ 5
ಪರಶು ಮೃಗಾಭಯ ವರದ ಚತುರ್ಭಜ
ಪರಮ ಫವನ ಶೀಲ ಪುಣ್ಯ ವಿಶಾಲ 6
ಶರಣಾಗತ ತ್ರಾಣ ನಿಜಕರ್ಮ ನಿರ್ಲೇಪ
ಚಾಪ ತ್ರಿಭುವನ ದೀಪ 7
ಮಂದರಗಿರಿ ವಾಸ ಮನ್ಮಥತನು ನಾಶ
ನಂದಿವಾಹನ ಭೃಂಗಿನಾಟ್ಯ ವಿಲಾಸ 8
ಮುನಿವಂದ್ಯ ಮೃದುಪಾದ ಘನ ಕಕುದ್ಗಿರಿವಾಸವನಜಾಕ್ಷ ತಿರುಪತಿ ವೆಂಕಟರೂಪ 9