ಫಾಲನಯನ ನುತ ಪಾಲಿಸು ಸತತ
ಪಾಲಿಸು ಸುರನರ ಜಾಲಸುಚರಿತ ಪ
ಲೀಲಾನಟನ ಫಣಿಶೈಲನಿಳಯ ಭಕ್ತ
ಪಾಲವಿಧೃತ ವನಮಾಲ ಶ್ರೀಲೋಲ 1
ಬಾಲತನದಿ ನಿಜ ಲೀಲಾ ಚರಿತಗುಣ
ಜಾಲವಿಮೋಹಿತ ಬಾಲಾನುಕೂಲ 2
ಧಾರಾಧರಾಭ ಶರೀರ ತಿರಸ್ಕøತ
ಮಾರ ವಿಹಗಸಂಚಾರ ಉದಾರ 3
ಸುಜನ ಪರಿ
ನಿಗಮ ವಿಚಾರ ವಿಹಾರ 4
ಕರುಣಾವರಣ ನಿಜಶರಣಾಭರಣ ಭಯ
ಹರಣ ಸಕಲ ಸುಖಕರಣ ಶ್ರೀರಮಣ 5
ಶೇಷಶಯನ ಕಲಿದೋಷದಮನ ಮೃದು
ಭಾಷ ಮನೋಹರಭೂಷ ಸುವೇಷ 6
ಹರಿದಾಸರನು ಬಲು ಹಿರಿದಾಗಿ ಮೆರೆಸುವ
ದ್ವಿರದ ವರದ ಶ್ರೀವರದವಿಠಲ 7