ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ
ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ.
ನಿರಂಜನ ತಾ ಲೀಲೆಯಿಂದ1
ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2
ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3
ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4
ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5