ಓಡಿ ಬಾ ನಿನ್ನ ಎತ್ತಿ ಮುದ್ದಾಡುವೆ ನಾಗಶಯನ ರಂಗನೇ ಪ.
ನಾಗಶಯನ ರಂಗನೆ, ನಾಗಶಯನ ರಂಗನೇ ಅ.ಪ.
ಕುಣಿ ಕುಣಿಯುತ ಗೆಜ್ಜೆ ಝಣ ಝಣರೆನೆÀ್ನ ಕೃಷ್ಣಾ
ಫಣಿಶಾಯಿ ನಿನ್ನ ನಾ ಕ್ಷಣದಲ್ಲಿ ಬಿಗಿದೂ 1
ಚಿನ್ನರೊಡನೆಗೂಡಿ ಮಣ್ಣನೆ ಮೆಲ್ಲದಿರೂ ಕೃಷ್ಣಾ
ಅಣ್ಣಯನೊಡನಾಡೊ ಚಿನ್ನ ಗೋಪಾಲನೇ 2
ಗೋಪಿಯರೊಡನಾಡಿ ಗೋಕುಲಾಂಬುಧಿ ಚಂದ್ರ
ಗೋಪಾಲಕೃಷ್ಣವಿಠಲ ಗೋವಳರೊಡೆಯ 3