ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಪಾಪವನು ಮಾಡಿರುವೆನೋ ಶ್ರೀಹರಿಯೇಇಂಥ ದುರ್ದೆಸೆಗೆನ್ನ ಎಳೆತಂದು ಬಿಡಲಿಕ್ಕೆ ಪ ಉದಯ ಕಾಲದೊಳೆದ್ದು ಉದರ ಪೋಷಣೆಗಾಗಿಹದವನರಿಯದೆ ಬಳಲಿ ಅಂತಿಂತು ಬಡೆದಾಡಿಬದುಕು ತಂದೊಡಲ ಹೊರಕೊಂಡು ಸಲೆನನ್ನಪದವ ನೆನೆಯಲು ಸ್ವಲ್ಪ ಸಹ ವೇಳೆ ಸಿಗದಂತೆ 1 ಹಿಡಿದ ಕಾರ್ಯಗಳೆಲ್ಲ ಬಿಡದೆ ನಿಷ್ಫಲವಾಗಿಒಡವೆ ಇಲ್ಲದ ಬರಿಯ ಒಡೆತನಕೆ ಅಣಿಮಾಡಿಮಡದಿ ಮಕ್ಕಳ ಬಿರುಸು ನುಡಿಗೇಳಿ ಮನನೊಂದುಸುಡುಬಾಳ್ವೆ ಇದನೆಂದು ಮುಡುಕುವಂದದು ಗೈಸಿ 2 ನಂಬಿದವರನು ಹರಿಯು ಬೆಂಬಿಡನು ಎಂದೆಂದುಎಂಬ ಬಿರುದನು ತೊರೆದು ಇಂಬುಗೊಡದಿರಲಿಕ್ಕೆಅಂಬುಜಾಕ್ಷನೆ ನಿನಗೆ ಸಂಬಂಧವಿರದೇನುಹಂಬಲಿಪ ದುಃಸ್ಥಿತಿಗೆ ತುಂಬ ತಂದಿಡಲಿಕ್ಕೆ 3 ಅಣುಗರಿಗೆ ಉಣಿಸಲಿಕೆ ಹಣವೆತ್ತ ಗಳಿಸಲಿಫಣಿಶಯನ ನಿನಗಿನ್ನು ಗುಣವೆತ್ತ ತೋರಿಸಲಿಮಣಿಗಳನು ಎಣಿಸುತ್ತ ಪ್ರಣವೆತ್ತ ಧೇನಿಸಲಿಹಣಿವ ಭವದೊಳು ಸಿಲುಕಿ ಕ್ಷಣವು ಸಹ ಸಿಗದಾಯ್ತು 4 ಬಾಳಿನೊಳು ಸೌಖ್ಯವೇ ಆಳವೈಶ್ವರ್ಯವೆತೋಳಿನೊಳು ದಾಢ್ರ್ಯವೆ ಚಿತ್ತದೊಳು ಸ್ಥೈರ್ಯವೆಹೇಳು ಗದುಗಿನ ವೀರನಾರಾಯಣನೆ ಮಣಿವೆ 5
--------------
ವೀರನಾರಾಯಣ
ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ಪ ಆಳೋ ಅರಸನೇ ಅ.ಪ. ಗಾಣ ಎಳೆಯುವ ಕ್ವಾಣನಾದೆನೋ ಕಾಣವೋ ನಯನಾ ಕಾಣಿ ವೇಣುಗೋಪಾಲ 1 ಮಾಯಾ ಮಗನಿಗೆ ನಾಯನಾಗಿರುವೆ ಮಾಯಾ ಕಾಯೋ ನರಹರಿ 2 ಬೇಡುವರು ಧನ ಕಾಡಿ ಎನ್ನನು ನೋಡು ಫಣಿಶಯನಾ ನಾಡಿಗೊಡೆಯಾ ಕೈ ಜೋಡಿಸುವೆನಯ್ಯಾ 3 ಬೇಗ ತವದಾಸನಾಗಿ ಮಾಡಿಕೋ ಸಾಗರಶಯನಾ ಈಗ ಭವಭಯ ನೀಗಿಸೈಯ್ಯ ಕೈ ಸಾಗದಾಯಿತು ಭಾಗವತಪ್ರಿಯಾ 4 ಆಶಾ ಬಿಡಿಸಿ ನೀ ಲೇಸು ಕೊಡು ಹನುಮೇಶವಿಠಲನೇ ಘಾಸಿಯಾದೆನು ಪೋಷಿಸಯ್ಯ ರಮೃಶ ಪಂಢರಿವಾಸ ವಿಠಲ 5
--------------
ಹನುಮೇಶವಿಠಲ
ದೂರ ಮಾಡುವರೇ ರಂಗಯ್ಯ ರಂಗಾ ಪ ದೂರ ಮಾಡುವರೇನೊ ಶಿಖರಪುರದ ಧೊರಿಯೆಶ್ರೀ ಶ್ರೀನಿವಾಸ ದಯಾಶರಧಿ ಅ.ಪ. ಕ್ಲೇಶ ಪಡುತ ಬಾಯಿ ಬಿಡಲು ಕಂಡು ದುಷ್ಟ ಜನರು ನೋಡಿ ಕಷ್ಟಬಿಡಿಸುತಿರಲು ಕಂಡು 1 ಕರ್ಮ ಬಂದು ಒದಗಿತೋ ದೇವ ಈಸು ಬವಣೆಬಟ್ಟು ಬಿಡುತಿರಲು ಕಂಡು 2 ದಾಸಜನರ ದೋಷವೆಣಿಸಬಹುದೆ ರಂಗ ಈಶನೆನಿಸಿಕೊಂಡುಮನ್ನಿಸಿ ಕೇಳೋ ಎನ್ನ ಬಿನ್ನಪ ಫಣಿಶಯನ ತಂದೆವರದಗೋಪಾಲವಿಠಲ 5
--------------
ತಂದೆವರದಗೋಪಾಲವಿಠಲರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನಂದನ ಕಂದ ಸುಂದರ ಕೋಮಲಾಂಗ ಚಂದ್ರವದನ ಮುಚುಕುಂದವರದಗೆ ಮಂಗಳಂ ಮಂಗಳಂ 1 ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವ ಹದ್ದುವಾಹನ ಖದ್ರಿ (ಕದ್ರು?) ಸುತ ಫಣಿಶಯನ ಮಂಗಳಂ ಮಂಗಳಂ 2 ಶ್ರೀಶ ಭೀಮೇಶಕೃಷ್ಣನೆ ವೆಂಕಟೇಶ ಸಾಸಿರನಾಮದೊಡೆಯ ಶ್ರೀನಿವಾಸ ಮಂಗಳಂ ಮಂಗಳಂ 3
--------------
ಹರಪನಹಳ್ಳಿಭೀಮವ್ವ
ಪರಾತ್ಪರ ಪರಮ ಪಾವನನೆ ಪರಾಕು ಫಣಿಶಯನ ಪಾಪಘ್ನ ಪ. ಸುರಾಸುರಾರ್ಚಿತ ಪುರಾಣಪುರುಷೇ- ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ. ನಯವೀತಭಯ ಪಾರ್ಥಪ್ರಿಯ ಸರ್ವ ನಿಯಾಮಕ ಚಿನ್ಮಯ ದಯಾವಂತ ಜಯಾಕಾಂತ ಹಯಾಸ್ಯ ಪಯೋಬ್ಧಿಶಯನ ವಿಯಾನ 1 ರಮಾರಮಣ ನಮಸ್ತೇ ನಿರುಪಮ ಮಹಿಮ ಮಮಾಪರಾಧ ಕ್ಷಮಾ ಕುರು ವಿ- ರಾಮ ನಿಯಮ ಪದುಮದಳನಯನ 2 ಗುಣಾರ್ಣವ ಶರಣಾಗತಭರಣ ನಿ- ರ್ಗುಣ ಶ್ರೀ ಲಕ್ಷ್ಮೀನಾರಾಯಣ ಪ್ರಾಣ ಸುತ್ರಾಣ ದೇವ ಗಣಾಗ್ರಣಿಯಾನಂದ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಿರೀಶ ಹರೇಗೋವಿಂದಾ ಪ ದಾನವ ಕುಲಸಂಹಾರಕಾ ದೀನ ತಾರಕಾ ದೀನ ತಾರಕಾ ಪರಮ ಪಾವನ ರೂಪಾ 1 ಈರೇಳು ಲೋಕದ ಜೀವನಾ ವರಪಾವನಾ ವಿನುತ ದಯಚರಣಾ2 ಭಯಹರ ಆನಂದಸಾಗರಾ ದಯ ಸಾಗರಾ ದಯಸಾಗರಾ ಗರುಡಗಮನ ವರ ಫಣಿಶಯನಾ3 ದುರಿತ ಕುಲಾಂಬುಧಿ ಶೋಷಣಾ ಖರದೋಷಣಾ ಖರದೋಷಣಾ ತನು ಪರ್ವತ ಕುತಿಲಿಶಾ4 ಸುರವರ ಮುನಿಜನ ಪಾಲನಾ ಧರಿಲೋಲನಾ ಧರಿ ಲೋಲನಾ ರಾಯಣ ಸರಜ ನೇತ್ರಾ5 ರವಿಕೋಟಿ ನಿಧನಂದ ನಂದನಾ ಭವಬಂಧನಾ ಪತಿ ಜನಕಾ6 ಅಸಮ ಪಯೋಧರ ಸುಂದರಾ ದಶಕಂಧರಾ ದಶಕಂಧರಾ, ಮರ್ಧನ ನಿರುಪಮ ಚರಿತಾ7 ಸಕಲ ವ್ಯಾಪಕ ಯದುನಾಯಕಾ ಸುಖದಾಯಕಾ ಸುಖದಾಯಕಾ ಮಹಿಪತಿ ನಂದನ ಪ್ರೀಯಾ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋ ಜೋ ಶ್ರೀ ಕೃಷ್ಣ ಪರಮಾನಂದಜೋ ಜೋ ಗೋಪಿಯ ಕಂದ ಮುಕುಂದ ಪ.ಪಾಲುಗಡಲೊಳು ಪವಡಿಸಿದವನೆ ಒಂದಾಲದೆಲೆಯ ಮೇಲೆ ಮಲಗಿದ ಶಿಶುವೇ ||ಶ್ರೀ ಲತಾಂಗಿಯರ ಚಿತ್ತವಲ್ಲಭನೇಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ 1ಹೊಳೆಯುವ ರನ್ನದ ತೊಟ್ಟಿಲ ಮೇಲೆಢಳಿ ಢಳಿಸುವ ಗುಲಗುಂಜಿಯ ಮಾಲೆ ||ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ 2ಆರ ಕಂದ ನೀನಾರ ನಿಧಾನಿಆರ ರತ್ನವೊ ನೀನಾರ ಮಾಣಿಕವೋ ||ಸೇರಿತು ಎನಗೊಂದು ಚಿಂತಾಮಣಿಯು - ಎಂದುಪೋರನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ3ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆಮನೆಯ ಕೆಲಸವಾರು ಮಾಡುವರಯ್ಯ ||ಮನಸಿಗೆ ಸುಖನಿದ್ರೆ ತಂದುಕೊ ಬೇಗಫಣಿಶಯನನೆ ನಿನ್ನ ಪಾಡಿ ತೂಗುವೆನು - ಜೋ ಜೋ 4ಅಂಡಜವಾಹನ ಅನಂತ ಮಹಿಮಪುಂಡರೀಕಾಕ್ಷ -ಪರಮ ಪಾವನ ||ಹಿಂಡು ದೈವದಗಂಡ ಉದ್ಧಂಢ ದೇವನಪಾಂಡುರಂಗ ಶ್ರೀ ಪುರಂದರವಿಠಲ - ಜೋ ಜೋ 5
--------------
ಪುರಂದರದಾಸರು
ಪರಾತ್ಪರಪರಮಪಾವನನೆಪರಾಕುಫಣಿಶಯನ ಪಾಪಘ್ನಪ.ಸುರಾಸುರಾರ್ಚಿತ ಪುರಾಣಪುರುಷೇ-ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ.ನಯವೀತಭಯ ಪಾರ್ಥಪ್ರಿಯ ಸರ್ವನಿಯಾಮಕ ಚಿನ್ಮಯದಯಾವಂತ ಜಯಾಕಾಂತಹಯಾಸ್ಯಪಯೋಬ್ಧಿಶಯನ ವಿಯಾನ1ರಮಾರಮಣ ನಮಸ್ತೇ ನಿರುಪಮ ಮಹಿಮಸುಮೇಧ ಸುರೋತ್ತಮಮಮಾಪರಾಧ ಕ್ಷಮಾ ಕುರು ವಿ-ರಾಮ ನಿಯಮ ಪದುಮದಳನಯನ 2ಗುಣಾರ್ಣವ ಶರಣಾಗತಭರಣ ನಿ-ರ್ಗುಣ ಶ್ರೀ ಲಕ್ಷ್ಮೀನಾರಾಯಣಪ್ರಾಣಸುತ್ರಾಣದೇವಗಣಾಗ್ರಣಿಯಾನಂದ ಗೋವಿಂದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ