ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ
ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1
ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2
ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3
ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4
ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ5