ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ ದೀನೊದ್ದರ ಸಗಟಾಸುರದಮನಾ ಆನಂದ ಮೂರುತಿ ಫಣಿವರ ಶಯನಾ 1 ಕರುಣಾ ಕರಗಿರಿಧರ ಸರ್ವೇಶಾ ಶರಣಾಗತ ವತ್ಸಲ ಪಯೋನಿಧಿವಾಸಾ 2 ಕಂಬುಕಂದರ ಕಮಲಳಾಕ್ಷಾ ಅಂಬುಜ ಭವನುತಗೋಗೋರಕ್ಷಾ 3 ಶಂಬರ ಮಥನ ಜನಕ ಮಹಾ ಮಹಿಮಾ ಜಂಭಭೇದಿಸುತ ಸಖಘನ ಶಾಮಾ 4 ಪೀತಾಂಬರಧರ ಕೃಷ್ಣ ಶ್ರೀಧರಾ ಮಾತುಳನಾಶನ ಕೃತಭೂಧರಾ 5 ಗುರುಮಹಿಪತಿ ಸುತ ಜೀವನರಾಮಾ ಪರಮಾನಂದ ಕಾಯಕ ಗುಣಧಾಮಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ಶರಣು ಶಿರೀಶ ಹರೇ ಪ ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1 ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2 ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3 ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4 ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5 ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6 ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7 ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8 ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9 ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10 ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣೇ ಅಜಭವ ಮುಖ್ಯ ಸುರಾರ್ಚಿತ | ಶರಣೇ ವಿಧು ಬಿಂಬಾನನ ಚಂಪಕ | ವರಣೇ ತ್ರಿಭುವನ ಜೀವನ ರಕ್ಷಕ ಶರಣೇ ದುರಿತಚಯಾ | ಹರಣೇ ಶ್ರೀದೇವಿ ಜಾಂಬೂನದಾಂಬರ | ವರಣೇ ಫಣಿವರಶಯನ ಚಿತ್ತನ | ಹರಣೇ ಕುಶಲದಿ ಮಹಿಪತಿ ನಂದನುದ್ಧರಸೆ ಜಯ ಜಯತು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ತಾರಿಸೆನ್ನ ಸಹಕಾರಿ | ದಯಬೀರಿ | ಸಿರಿ ಮನೋಹಾರಿ | ಶೌರಿ | ನರಹರಿ ಮರೆಯದೆ ಹೊರಿ ಮನ ಹರಿವಾರು | ಪರಿ ಪರಿ 1 ಸ್ಪುರಿತಾ ಚಕ್ರಗೋಗದಾಬ್ಜ ಭರಿತಾ | ಯುಧನಿರುತಾ | ಶೋಭಿತಾ | ನಿರ್ಜರ ಸರಿತಾ | ಗುರುತದನವರತ ದಲರಿತರ ದುರಿತಪ | ಹರಿ ಚಿದಾನಂದ ಭರಿತ ಸುಚರಿತಾ 2 ಸನ್ನುತ ಮಹಿಪತಿ | ಅಣುಗನೊಡಿಯಾ ಫಣಿವರ ಶಾಯೀ | ಎಣೆಗಾಣದಗಣಿತ | ಗುಣಗಣ ಮಣಿಖಣಿ | ಅಣುರೇಣು ತೃಣಕಣ ವ್ಯಾಪಕ ಪೂರಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವೆಂಕಟೇಶ ಸಲಹು ವೆಂಕಟೇಶಭಾವಿಕ ಸೇವಕ ಭವಭಯನಾಶ ಪ.ಸುರಾರಿ ಗಜಗಳೆಂಬ ಗಣಕೆಕಂಠೀರವಕರಿರಾಜ ಸಂಕಟ ಛಿತ್ತ ದೇವಪರಮಭಾಗವತರ ಸಮೂಹ ಸಂಜೀವನಪುರಹರವರಮತ್ತವೃಕ( ಷ?)ಮಥನ 1ವನಜಭವ ಸವಿೂರರೊಡೆಯ ಶ್ರೀರಮಣಮುನಿ ಹೃದಯಾಲಯ ಪರಿಪೂರ್ಣಫಣಿವರಶಾಯಿಪರಾತ್ಪರಅಗಣಿತಗುಣಗಂಭೀರ ಜಗದದಾತ2ಶುಕಶೌನಕ ಸನಕಾದಿ ದೇವಋಷಿಸಕಳ ಸುರಭೂಸುರ ರಾಜಾಧೀಶಭಕುತವತ್ಸಲಬಾದರಾಯಣಹರಿಹಯಮುಖ ಪ್ರಸನ್ವೆಂಕಟ ಗಿರಿನಿಲಯ 3
--------------
ಪ್ರಸನ್ನವೆಂಕಟದಾಸರು