ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಣದೋಷವೆನ್ನದಲ್ಲ ರಂಗಯ್ಯ ರಂಗ ಪ ಗುಣದೋಷಯೆನ್ನದಲ್ಲ ಫಣಿರಾಜಶಯನನೆ ಅಣುರೇಣು ತೃಣಕಾಷ್ಠಭರಿತ ನೀನಾಗಿರಲ್ಕೆ ಅ.ಪ ಮಂತ್ರಕರ್ತನು ನೀನು ಮಂತ್ರಾಧೀನನು ನೀನು ಮಂತ್ರಕೊಲಿವವ ನೀನು ಮಂತ್ರಿಯೂ ನೀನು ಯಂತ್ರವೆನ್ನದೊರಂಗ ಯಂತ್ರನಡೆಸುವವ ನೀನು ಯಂತ್ರವೆಂಬುದೀ ದೇಹ ಯಂತ್ರಿಯೇ ನೀನಾಗಿರಲು 1 ಅಂಬರಾಕಾರನು ನೀನು ಅಂಬುಧಿ ಅಂಬುಜ ನೀನು ಅಂಬುವಾಹಕಾರ ಪೀತಾಂಬರನು ನೀನು ಅಂಬುಧಿಯೊಳೆನ್ನ ಬಿಟ್ಟು ಅಂಬರಕ್ಕೆ ಸೆಳೆವ ನೀನು ಅಂಬು ಅಂಬರದೊಳಗೆ ಕೈಯ ಬೊಂಬೆಯು ನಾನಾಗಿರಲ್ಕೆ2 ನಾಡುಕಾಡು ಬೀಡುಗಳ ನೋಡು ಮಾಡು ಬೇಡು ಎಂಬೇ ಆಡಿ ಓಡಿ ಮಾಡುವುದ ನೋಡುತಿರುವೆ ಆಡಿ ಬೇಡಿ ಪಾಡಿ ಕೊಂಡಾಡಿ ಭಕ್ತಿಯನ್ನಿತ್ತು ಜೋಡಿ ನೀನಾಗುವೆ ಮತ್ತೆ ಮಾಂಗಿರೀಶ ಸುಪ್ರಕಾಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್