ಮಂಗಳಂ ಶ್ರೀರಂಗಗ ಮಂಗಳಂ
ಇಂಗಿತ ಭಕ್ತರ ಅಂಗಸಂಗಾದವಗ ಪ
ಸಿರಿತಳಕ ಮಂಗಳ ಕಾಲಿಯ ವರದನಾ
ವರನಖಮಂಗಳ ಗಂಗೆ ಪಡಿದನಾ
ಚರಣ ಕಮಂಗಳ ಅಹಿಲ್ಯ ಉದ್ಧಾರಗ
ನೆರೆಜಂಘಗೆ ಮಂಗಳೆ ಶೊದಾನಂದನಾ 1
ತೊಡೆಗಳಿಗೆ ಮಂಗಳ ಗರುಡ ವಾಹನನಾ
ನಡುವಿಗೆ ಮಂಗಳ ಧೃವ ಗೊಲಿದನ
ಒಡಲ ಕಮಂಗಳ ಜಗವಳ ಕೊಂಬನಾ
ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2
ಉರ ಸಕ ಮಂಗಳ ಉಪಮನ್ಯು ಪ್ರೀಯನಾ
ಸಿರಿವಕ್ಷಕ ಮಂಗಳ ಭೃಗು ರಕ್ಷನಾ
ಕರಗಳಿಗೆ ಮಂಗಳ ಕರಿರಾಜ ವರದನಾ
ಕೊರಳಿಗೆ ಮಂಗಳ ತುಳಸಿ ಧರನಾ 3
ಇದು ಶೃತಿಗೆ ಮಂಗಳ ಹನುಮನೇ ಕಾಂತನಾ
ವದನಕ ಮಂಗಳ ವಿದುರ ಗೊಲಿದನಾ
ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ
ಮದನ ಮೋಹನನಾ 4
ಸಿರಸಕ ಮಂಗಳ ಫಣಿರಾಜಶಯನನಾ
ದೊರೆತನಕ ಮಂಗಳ ಶ್ರೀ ಭೂರಮಣನಾ
ಗುರುತನಕ ಮಂಗಳ ಉದ್ಬವತಾರಕನಾ
ಕರುಣಿಗೆ ಮಂಗಳಾರ್ಜುನ ಬೋಧನಾ 5
ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ
ಅಭಯಕ ಮಂಗಳಾಜಮೀಳ ಪಾಲನಾ
ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ
ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6
ಸಿರಿನಾಮಕ ಮಂಗಳ ನಾರದ ಪ್ರೀಯನಾ
ಕ ಮಂಗಲ ಶಿವ ವಂದ್ಯನಾ
ಗುರುವರ ಮಹಿಪತಿ ನಂದನಸಾರಥಿ
ಬಿರದಿಗೆ ಮಂಗಳಾಂಬರೀಷ ನೊಡಿಯನಾ 7