ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಚಿರಂಜೀವಿಯಾಗು ಗುರುವರ ಕುಮಾರಿ ಪರಮಪ್ರಿಯ ಶ್ರೀ ಗುರುಪದಧೂಳಿ ಕರುಣದಲಿ ಪ. ಶುಕ್ಲಪಕ್ಷದ ಚಂದ್ರನಂತೆ ಆಭಿವೃದ್ಧಿಸುತ ಅಕ್ಲೇಶಳಾಗಿ ಅನುಗಾಲದಲ್ಲಿ ಚಿಕ್ಕತನದಿಂದ ಗುರು ಬೋಧಾಮೃತವ ಸವಿದು ಅಕ್ಕರೆಯಿಂದ ಪಿತ ಮಾತೆ ಪೋಷಿತಳಾಗಿ 1 ಭೂ ಕಲ್ಪತರುವೆನಿಪ ಗುರುಗಳಿತ್ತಂಕಿತವ ನಿತ್ಯ ಪಠಣಗೈದು ಏಕಾಂತ ಭಕ್ತಿಯಿಂ ಇಂದಿರೇಶನ ಸ್ತುತಿಸಿ ಶ್ರೀಕಾಂತ ಹರಿಯ ಮಂಗಳ ಕೃಪೆಯ ಪಡೆಯುತಲಿ 2 ಪುಟ್ಟಿದಾ ಗೃಹಕೆ ಚಿಂತಾಮಣಿಯು ಎಂದೆನಿಸು ಪತಿ ಗೃಹಕೆ ಗೃಹಲಕ್ಷ್ಮಿ ಎಂದೆನಿಸು ಅಷ್ಟು ಬಂಧು ಜನಕೆ ಅಮೃತವಾಣಿಯು ಎನಿಸು ಕೃಷ್ಣ ಭಕ್ತರನು ಪೂಜಿಸುತಲಿರು ಸತತ 3 ಇಂದು ಗುರುಕೃಪೆಗೈದ ಆಶೀರ್ವಾದದುಡುಗೆಯನು ಚಂದದಿಂ ಧರಿಸಿ ಮಂಗಳಕರಳು ಎನಿಸಿ ಒಂದು ಕ್ಷಣ ಬಿಡದೆ ಫಣಿರಾಜಶಯನನ ಸ್ಮರಣೆ ಮುಂದೆ ಸತ್ಪುತ್ರ ಪೌತ್ರರ ಪಡೆದು ಸುಖದಿ 4 ನಾಗಶಯನನ ಭಕ್ತನಾದ ಪತಿಯನೆ ಸೇರಿ ಭೋಗಿಸುತ ಇಹಪರದ ಸುಖಭಾಗ್ಯವ ಭಾಗವತಪ್ರಿಯ ಗೋಪಾಲಕೃಷ್ಣವಿಠ್ಠಲನ ಬಾಗಿ ನಮಿಸುತ ಸುಮಂಗಳೆಯಾಗಿ ನಿತ್ಯದಲಿ 5
--------------
ಅಂಬಾಬಾಯಿ
ಗುಣದೋಷವೆನ್ನದಲ್ಲ ರಂಗಯ್ಯ ರಂಗ ಪ ಗುಣದೋಷಯೆನ್ನದಲ್ಲ ಫಣಿರಾಜಶಯನನೆ ಅಣುರೇಣು ತೃಣಕಾಷ್ಠಭರಿತ ನೀನಾಗಿರಲ್ಕೆ ಅ.ಪ ಮಂತ್ರಕರ್ತನು ನೀನು ಮಂತ್ರಾಧೀನನು ನೀನು ಮಂತ್ರಕೊಲಿವವ ನೀನು ಮಂತ್ರಿಯೂ ನೀನು ಯಂತ್ರವೆನ್ನದೊರಂಗ ಯಂತ್ರನಡೆಸುವವ ನೀನು ಯಂತ್ರವೆಂಬುದೀ ದೇಹ ಯಂತ್ರಿಯೇ ನೀನಾಗಿರಲು 1 ಅಂಬರಾಕಾರನು ನೀನು ಅಂಬುಧಿ ಅಂಬುಜ ನೀನು ಅಂಬುವಾಹಕಾರ ಪೀತಾಂಬರನು ನೀನು ಅಂಬುಧಿಯೊಳೆನ್ನ ಬಿಟ್ಟು ಅಂಬರಕ್ಕೆ ಸೆಳೆವ ನೀನು ಅಂಬು ಅಂಬರದೊಳಗೆ ಕೈಯ ಬೊಂಬೆಯು ನಾನಾಗಿರಲ್ಕೆ2 ನಾಡುಕಾಡು ಬೀಡುಗಳ ನೋಡು ಮಾಡು ಬೇಡು ಎಂಬೇ ಆಡಿ ಓಡಿ ಮಾಡುವುದ ನೋಡುತಿರುವೆ ಆಡಿ ಬೇಡಿ ಪಾಡಿ ಕೊಂಡಾಡಿ ಭಕ್ತಿಯನ್ನಿತ್ತು ಜೋಡಿ ನೀನಾಗುವೆ ಮತ್ತೆ ಮಾಂಗಿರೀಶ ಸುಪ್ರಕಾಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಂ ಶ್ರೀರಂಗಗ ಮಂಗಳಂ ಇಂಗಿತ ಭಕ್ತರ ಅಂಗಸಂಗಾದವಗ ಪ ಸಿರಿತಳಕ ಮಂಗಳ ಕಾಲಿಯ ವರದನಾ ವರನಖಮಂಗಳ ಗಂಗೆ ಪಡಿದನಾ ಚರಣ ಕಮಂಗಳ ಅಹಿಲ್ಯ ಉದ್ಧಾರಗ ನೆರೆಜಂಘಗೆ ಮಂಗಳೆ ಶೊದಾನಂದನಾ 1 ತೊಡೆಗಳಿಗೆ ಮಂಗಳ ಗರುಡ ವಾಹನನಾ ನಡುವಿಗೆ ಮಂಗಳ ಧೃವ ಗೊಲಿದನ ಒಡಲ ಕಮಂಗಳ ಜಗವಳ ಕೊಂಬನಾ ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2 ಉರ ಸಕ ಮಂಗಳ ಉಪಮನ್ಯು ಪ್ರೀಯನಾ ಸಿರಿವಕ್ಷಕ ಮಂಗಳ ಭೃಗು ರಕ್ಷನಾ ಕರಗಳಿಗೆ ಮಂಗಳ ಕರಿರಾಜ ವರದನಾ ಕೊರಳಿಗೆ ಮಂಗಳ ತುಳಸಿ ಧರನಾ 3 ಇದು ಶೃತಿಗೆ ಮಂಗಳ ಹನುಮನೇ ಕಾಂತನಾ ವದನಕ ಮಂಗಳ ವಿದುರ ಗೊಲಿದನಾ ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ ಮದನ ಮೋಹನನಾ 4 ಸಿರಸಕ ಮಂಗಳ ಫಣಿರಾಜಶಯನನಾ ದೊರೆತನಕ ಮಂಗಳ ಶ್ರೀ ಭೂರಮಣನಾ ಗುರುತನಕ ಮಂಗಳ ಉದ್ಬವತಾರಕನಾ ಕರುಣಿಗೆ ಮಂಗಳಾರ್ಜುನ ಬೋಧನಾ 5 ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ ಅಭಯಕ ಮಂಗಳಾಜಮೀಳ ಪಾಲನಾ ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6 ಸಿರಿನಾಮಕ ಮಂಗಳ ನಾರದ ಪ್ರೀಯನಾ ಕ ಮಂಗಲ ಶಿವ ವಂದ್ಯನಾ ಗುರುವರ ಮಹಿಪತಿ ನಂದನಸಾರಥಿ ಬಿರದಿಗೆ ಮಂಗಳಾಂಬರೀಷ ನೊಡಿಯನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು