ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ
ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ
ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ
ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ
ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ
ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ 1
ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ
ರೊಳಗೆ ಮೇಲೆನಿಪ ಸುಶೀಲ ತುಳಿದೆ
ಬಕ ಆಘಪ್ರಲಂಬಾದಿ ದೈತ್ಯಜಾಲ
ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್
ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ 2
ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ
ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ
ತೋರಿದ ಪರಾತ್ಪರ
ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು
ಅಪ್ರಮೇಯ ಜಾಜೀಶ್ವರ 3