ಬಂದ ಗೋವಿಂದ ವಾರಣೇಂದ್ರನ ಬಳಿಗಾಗ
ಸಿಂಧು ವೈಕುಂಠದಿಂದ ಪ
ಇಂದಿರೆಯೊಡನೇನೊಂದನೂ ನುಡಿಯದೆ
ನಿಂದು ಕಾದಿಹ ವಿಹಗೇಂದ್ರನ ನೋಡದೆ
ಒಂದೇ ಸಡಗರದಿಂದೋಡುತೆ ನಾ
ಗೇಂದ್ರಶಯನ ನಾಗೇಂದ್ರನ ಪೊರೆಯಲು 1
ಬಂಗಾರ ಮಕುಟೋತ್ತಮಾಂಗದಿ ಶೋಭಿಸೆ
ಶೃಂಗಾರ ಫಣಿಯೊಳು ಮಂಗಳಕರ ತಿಲಕ
ಕಂಗಳ ಕಾಂತಿ ತ್ರಿಜಗಂಗಳ ಬೆಳಗಲು
ಹಿಂಗದೆ ಶಂಖ ಚಕ್ರಾಬ್ಜಂಗಳು ಕರದಲ್ಲಿ 2
ಅಂಗಜನಯ್ಯ ಶುಭಾಂಗ ಅಮರ ತ
ಭವ ಭಂಗ ಸುರಕುಲೋ
ತ್ತುಂಗ ರಂಗ ಉತ್ತುಂಗ ಮಹಿಮ ಮಾ
ತಂಗ ಗಿರಿಯ ನರಸಿಂಗನು ಬೇಗದಿ 3