ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ - * ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ ಆಲಯದೊಳಗೆ ನೀನಾಡದೆ ಬೆಣ್ಣೆ ಪಾಲು ಸಕ್ಕರೆಯನೊಲ್ಲದೆ ಚಿಕ್ಕ ಬಾಲೇಯರೊಳು ನೀನಾಡದೆ ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ 1 ಬಿಟ್ಟ ಮುತ್ತಿನ ಬೊಗಸೆ ಕಂಗಳು ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು ದಿಟ್ಟತನದಿ ಬರುವ ಅಂದವು ಮುದ್ದು ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ 2 ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ ದೃಷ್ಟಿಗೆಟ್ಟೆನೊ ನಿನ್ನ ನೋಡದೆ - ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ - ವಿಠಲ ನೀಯೆನ್ನ ಕಣ್ಣ ಮುಂದಾಡದೆ 3
--------------
ಶ್ರೀದವಿಠಲರು
ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ ಪ ಸೊಗಸಾದ ಕಂಚುಕವ ತೋಟ್ಟು | ಮೃಗಮದದ ಕಸ್ತೂರಿ ಬಿಟ್ಟು ಮೃಗನಯನೆ ಫಣಿಯೊಳಿಟ್ಟು 1 ರಮಣೇರು ಕೂಡಿ ನಿನ್ನ ಘಮ‌ಘಮಿಸು ಕರೆಯುತಿಹರೇ | ಪ್ರಮದಾಮಣಿಯ ಶಿರದಿ ಸುಮಗಳ ಮುಡಿದು ಮುದದೀ 2 ಸಿರಿಯರಸ ಕಮಲನಯನ ವರಶಾಮಸುಂದರನಾ | ಸ್ಮರಿಸುತ್ತ ಮನದಿ ಲಲನೆ ತಿರಸ್ಕರಿಸದೆ ಹಂಸಗಮನೆ 3
--------------
ಶಾಮಸುಂದರ ವಿಠಲ