ಶರಣು ಶಿರೀಶ ಹರೇ ಪ
ಭುವನದಲಿ ಶೃತಿ-ಯಡಗೇ|
ಯವಿಗಳಾಡಿಸದೇ|
ಜವದಲಿ ಬಂದು ನೀ ತಮನನು ಕೊಂದೇ|
ಕಾವೋದೋ ಎನ್ನಾ ಮತ್ಸ್ಯರೂಪಾ 1
ಸುರಸುರರು ಕೊಡಿ|
ಶರಧಿಯ ಮಥಿಸುದಕಿ|
ಕರುಣದಿ ಬೆನ್ನವನಿತ್ತೆ ನೀನಗತಿ|
ಕಾವೋದು ಎನ್ನ ಕಮಠೆ ರೂಪಾ 2
ಹಿರಣ್ಯಾಕ್ಷನ ಕೊಂದು|
ಧರೆಯನು ದಂತದಲೆ|
ಧರಿಸಿದೆ ನೀ ಅನವರತಗಳಿಂದಲೇ|
ಕಾವುದೋ ಎನ್ನ ವರಹಾ ರೂಪ 3
ಛಲದಿ ಪ್ರಹ್ಲಾದ ಕರಿಯೇ|
ಕುಲಿಶ ಸಮುಗುರುದಲೆ|
ಮೆಳೆತನ ಸೀಳಿದೆ ಕರಳ್ಳೊನಮಾಲೆ|
ಕಾವುದೋ ಎನ್ನ|ನರಹರಿ ರೂಪ 4
ಚಂಡ ಬಲಿವವರದನೇ|
ದಂಡ ಕಾಷ್ಟಕರನೇ|
ಕುಂಡಲ ಸುಕಮಂಡಲ ಭೂಷಿತನೇ|
ಕಾವುದೋ ಎನ್ನ ವಾಮನ ರೂಪ 5
ಸುಜನರ ಪ್ರತಿ-ಪಾಲಾ
ರಾಜಾಕುಲಾಂತಕನೇ|
ರಾಜಿಸುತಿಹ ವರ ಪರಶುಧರನೇ|
ಕಾವುದೋ ಎನ್ನಾ ಭಾರ್ಗವರೂಪಾ6
ಋಷಿಯ ಮಖ ಕಾಯಿದು
ಶಶಿಧರಧನು ಮುರಿದೇ|
ದಶಮುಖ ಕುಂಭಕರ್ಣರ ಮರ್ದಿಸಿದೆ|
ಕಾವುದೋ ಎನ್ನಾ ರಾಘವ ರೂಪ7
ಎಣೆಗಾಣದ ಮಡುವಿನಲಿ|
ಫಣಿವರ ಫಣಿಮ್ಯಾಲ|
ಕುಣಿದೆ ಆನಂದದಿ ಕೊಳಲನೂದುತ್ತಲೇ|
ಕಾವುದೋ ಎನ್ನಾ ಯಾದವ ರೂಪ8
ಮೂರೆನಿಪ ಪುರದಲಿ|
ನಾರೇಶ ದೃತವಳಿದೇ|
ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ|
ಕಾವುದೋ ಎನ್ನಾ ಬೌದ್ದ ಸ್ವರೂಪಾ9
ಸಲಹಬೇಕೆಂದು ಜಗವಾ|
ಇಳೆಯಾ ಭಾರರ ತರಿದೇ|
ಸುಲಲಿತ ಕುದುರೆಯ ಏರಿ ಮೆರೆದೆ|
ಕಾವಿದೋ ಎನ್ನ ಕಲ್ಕಿಸ್ವರೂಪ 10
ಸಹಕಾರಿ ಭಕ್ತರಿಗೇ|
ಮಹಿಮೆ ದೋರಿದೆ ಹೀಗೆ|
ಮಹಿಪತಿ ಸುತ ಪ್ರಭು ಸಲಹು ನೀಯೆನಗೆ|
ಕಾವುದೋ ಎನ್ನಾ ಅನಂತರೂಪ 11