ಕಾಯಿ ಕಾಯಯ್ಯಾ | ಅನಾಥ ಬಂಧೋ ಪ
ಶರಣರ ದುರಿತಪಹರಣ ಸುಪಾವನ |
ಚರಣನೆ ಕೌಸ್ತುಭಾಭರಣ ಹೇಮಾಂಬರಾ |
ತರಣಿ ಶತ |
ಕಿರಣ ವಿರಾಜಿತ ಕರುಣಾ ಸಿಂಧೋ 1
ವಾರಣಭಯ ನಿವಾರಣ ಸುರಜನ |
ತಾರಣ ದೈತ್ಯ ವಿದಾರಣ ಸೃಷ್ಟಿಯೆ |
ಕಾರಣ ಚಿತ್ಸುಖ ಪೂರಣ ಮುನಿಜನ |
ಪ್ರೇರಣ ಫಣಿಮದ ಹಾರಣ ಧೀರಾ2
ಚಕೋರ ಸು |
ಚಂದಿರ ಸ್ಮರಚಿತ ಸುಂದರ ಸದ್ಗುಣ |
ಮಂದಿರ ವಿಧಿಹರ ವಂದ್ಯ ಮುಕಂದನೇ |
ತಂದೆ ಮಹಿಪತಿ ನಂದನ ಪ್ರಾಣಾ 3