ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಪ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1 ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ಫಣಿಭೂಷಣ ಶಂಭೋ 2 ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
--------------
ವಿಜಯದಾಸ
ಜಯ ಶಂಕರ ಪರಮೇಶ ದಿಗಂಬರಜಯ ಗಿರಿಜೆಯವರ|ಸಾಂಬನಮೋಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಯಕಿಂಕರಪರಿಪಾಲಪರಾತ್ಪರಜಯ ಭವಭಯಹರ ಶಂಭು ನಮೋ1ವಾಸವಸುತ ಫಣಿಭೂಷಣ ನತಜನ-ಕ್ಲೇಶನಾಶ ಜಗದೀಶ ನಮೋ |ಕೇಶವ ಹಿತಭೂತೇಶಜಯತು ಕೈ-ಲಾಸ ವಾಸ ಅಘನಾಶ ನಮೋ2ದಂಡಧರನ ಶಿರಖಂಡನಶಶಿಧರರುಂಡಮಾಲ ಪ್ರಚಂಡ ನಮೋ |ಖಂಡ ಪರಶುಬ್ರಹ್ಮಾಂಡದೊಡೆಯ ಗೋ-ವಿಂದವಿನುತಚಂಡೇಶ ನಮೋ3
--------------
ಗೋವಿಂದದಾಸ
ಪಾಲಿಸು ಪರಮೇಶಾ ಪಾಪವಿನಾಶಾಪಾಲಿಸು ಪಾರ್ವತೀಶಾಫಾಲಲೋಚನಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪನಿತ್ಯನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯತೃಪ್ತನೆ ಖ್ಯಾತ ನಿತ್ಯನಂದನೆನೀಲಕಂಧರಶಶಿಧರನಿರ್ಮಲರಜತಾದ್ರಿ ನಿಲಯನೆ ವಿಲಯನೆ 1ಅಂಬಾ ವರದೇವ ಜಯ ಜಯವಿಶ್ವಕು-ಟುಂಬಿಲ ಸದ್ಭಾವಲಂಬೋದರ ಗುಹಜನಕ ಸದಾಶಿವನಂಬಿದೆ ಸಲಹೊ ಪ್ರಸೀತ ಸತ್ಪಾತ್ರ 2ಆಗಮಶ್ರುತಿಸಾರ ಭಕ್ತರಭವರೋಗಶೋಕವಿದೂರಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ 3
--------------
ಗೋವಿಂದದಾಸ
ಶಿವ ಶಂಬೋ ಶಂಕರಾ | ಶಿವ ಸೋಮಶೇಖರಾ |ಶಿವನೆ ಗಂಗಾಧರ | ಶಿವ ಗೌರೀವರ |ಶಿವ ಚರ್ಮಾಂಬರ | ಶಿವಭವಭಯಹರ 1ಶಿವ ನೀಲಕಂಧರಾ | ಶಿವಕಾಲಾ ಸಂಹರಾ |ಶಿವನೇ ಜಟಾಧರ | ಶಿವ ರಜತೇಶ್ವರ |ಶಿವ ಶೂಲಾಧರ | ಶಿವನಿಗೆ ಶಿರ ಸರ2ಶಿವ ಭಸ್ಮಾಲೇಪನಾ | ಶಿವವೃಷಭವಾಹನಾ |ಶಿವ ಫಣಿಭೂಷಣ ಶಿವಗೆ ತ್ರಿಲೋಚನ |ಶಿವ ಗೋವಿಂದ£À |ಶಿವ ದಾಸರ ಪ್ರಿಯಾ 3
--------------
ಗೋವಿಂದದಾಸ