ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಾಗದಿಂದೆನ್ನ ನೀಕ್ಷಿಸೈ ಪರಾಪರೇಶನೆ ಪರಾತ್ವರನೆ ನೀ-ಪರಾಕು ಮಾಡದೆ ಪಾಲಿಸೈ ಪ ವಿರಾಜಮಾನ ಸುವೀರಾಜವಾಹನ ವಿರಾಟ್ಪುರುಷ ವಿಶ್ವಂಭರ ಕರಾರವಿಂದದಿ ಕರಾದಿಗಳ ಪಿಡಿದರಾತಿ ಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹು ಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾ ಭರಣ ಗುಣಭೂಷಣ ಸುರಾರಿ ಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರೀಸುಕೋಮಲ ಶರೀರ ನಿನ್ನದು ಈಪರಿ ಪರಿಯದೆಂತುಟೋ ಕೇಳ್ಹರಿ 4 ಧಯಾನಿಧಿಯೇಧರ್ಮಾತ್ಮನೆ ನಿಯಾಮಿಸುವ ನಿರ್ಮಾಯನೆ 5 ವರೇಣ್ಯಸಜ್ಜನ ಶರಣ್ಯಪುಲಿಗಿರಿಯರಣ್ಯಮಧ್ಯ ವಿರಾಜಿತ ಹಿರಣ್ಯಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ6 ವ್ಯಾಘ್ರನೆಂಬುವತ್ಯುಗ್ರದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪಸುರಾಗ್ರಗಣ್ಯ ಪುಣ್ಯಾತ್ಮನೆ 7 ನಿರುತವು ಸನ್ನುತಿಗೈವರೆ ಪರಿಪರಿ ನಿನ್ನನೆ ಪೊಗಳ್ವರೆ 8 ನೀಜಗದಲ್ಲಿ ಒಲಿದಿರ್ಪೆಯ ನೀ ಕೈಗೊಂಬೆಯ 9 ನಿಜಪರದೊಲುನೀ ನಜಭವಮುಖಸುರವ್ರಜ- ಗೋಚರನಾಗಿಲ್ಲವೈ ತ್ರಿಜಗಕ್ಕೆ ಗೋಚರನಾಗಿಹೈ 10 ನಿತ್ಯತೃಪ್ತನೀನತ್ಯುತ್ತಮ ನಿಜ ಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಫಣಿಭೂಧರದೊಳು ನಿರುತವು ಭಕ್ತರ ಕರುಣದಿ ಪೊರೆಯುವ ಧೊರೆ ಸಿರಿವಲ್ಲಭವರದ ವಿಠಲ ಕರುಣಾಕರ 12
--------------
ಸರಗೂರು ವೆಂಕಟವರದಾರ್ಯರು