ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಿನೋಳ್ಮಾತಿಲ್ಲದ ಪಾತಕಜನಜತೆ ಜನ್ಮಕೆ ಮಾಡಬೇಡಿರಪ್ಪ ಪ ನೀತಿಗಡಕ ಮಹಕೋಟಿ ಕುಹಕರ ಸಂಗ ಕೊಂಡ ಕಾಣಿರಪ್ಪ ಅ.ಪ ಬಣಗು ಬಿನುಗರ ತಳ್ಳಿ ಫಣಿಪನ ಸಹವಾಸ ಕೇಳಿರಪ್ಪ ಅಣಕವಾಡುತ ಅನ್ಯಜನಸುದ್ದ್ಯೋಳ್ದಿನಗಳೆವ ಶುನಕ ಜನಮಿಗಳನೊದೆಯಿರಪ್ಪ1 ಚಲನಚಿತ್ತದ ಬಲುಹೊಲೆಮತಿಗಳ ಸಲಿಗೇಳೇಳು ಜನ್ಮಕೆ ಬೇಡಿರಪ್ಪ ವಿಲಸಿತ ನಡೆನುಡಿ ತಿಳಿಯದದುರುಳರ ಗೆಳೆತನ ಕಡೆತನಕ ಬಿಡಿರಪ್ಪ 2 ಧರ್ಮಗೆಟ್ಟು ದುಷ್ಕರ್ಮದುರುಳವ ದುರ್ಮದ ಬಿಟ್ಟು ದೂರಾಗಿರಪ್ಪ ನಿರ್ಮಲಸುಖ ನಿಜ ಮರ್ಮನವರಿಯದ ಧರ್ಮಿಗಳೆದೆಯನು ತುಳಿಯಿರಪ್ಪ 3 ಸತ್ಯಸನ್ಮಾರ್ಗವ ಮರ್ತ ಅಸತ್ಯರ ನೆತ್ತಿಮೇಲೆ ಹೆಜ್ಜಿಡಿರಪ್ಪ ನಿತ್ಯಮುಕ್ತಿ ಸುಖ ಗುರ್ತರಿಯದೆ ಯಮ ಮೃತ್ಯುವಶವ ಗೋಷ್ಠಿ ಬಿಡಿರೆಪ್ಪ 4 ಮರವೆ ಮಾಯಿಗಳ ಚರಣದಿ ಮುಟ್ಟಿದಿರಪ್ಪ ಪರಮ ಶ್ರೀರಾಮಪಾದ ಮರೆದ ದುರಾತ್ಮರ ದರುಶನ ಕನಸಿನೋಳ್ಬೇಡಿರಪ್ಪ 5
--------------
ರಾಮದಾಸರು
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು
ಶ್ರೀ ಶ್ರೀಪಾದರಾಜರು ಧರೆಯೊಳು ಮೂರೇಳು ಕುಮತರ ಭಾಷ್ಯವಕಿರುಕು ಹಾವಿಗೆ ಎಂದದಿ ರಚಿಸೆಚರಣದಿಂದಲಿ ತುಳಿದು ಶತ್ರು ಖಳರಾ ಕರೆದುಮೊರೆಯಿಡುತಿವೇ ಶಾಸ್ತ್ರಸೆರೆಯ ಬಿಡಿಸೀರೆಂದು ಪ . . . ಹರಿಪ್ರೀತಿಗಾಗೆ ನಿರ್ಮಿಳ ಸುಕೃತಂಗಳಾಧರಿಸಿದಾ ಕುಸುಮಪರಿಮಳಂಗಳಾನರನೊಬ್ಬ ದೂಷಿಸೆ ಕೇಳಿ ಸರ್ವವನುಳುಹೆಅರಕ್ಷಣದಿ ಅವನ ತನು ಬಿರಿಯೆ ರಕ್ಷಿಸಿದೆ 2 ಸುರನಾಥಪುರಕಂದು ಘನ ಪುಷ್ಪವಿಮಾನದಿಸರಿವುತ್ತಲಿರೆ ರಘುನಾಥೇಂದ್ರರವರಯೋಗಿ ವೃಂದಾವನ ಪ್ರದಕ್ಷಿಣೆ ಗೈಸಿಕರೆದು ಭಾಷಿಸಿ ಕಳುಹಿದಾಶ್ಚರ್ಯ ಚರಿತಾ 3 ಸರಸಿಜಾಕ್ಷನ ಧ್ಯಾನದೊಳಿರೆ ವ್ಯಾಸಮುನಿಯಾಉರಗ ಬಂಧಿಸಲು ಧ್ಯಾನದೊಳೀಕ್ಷಿಸಿಮರುತ ವೇಗದಿ ಪೋಗಿ ಫಣಿಪನೊಡನೆ ಭಾಷಿಸಿತೊಡರು ಬಿಡಿಸಿದ ಅಹಿಪಾಶವ ಗುರುರಾಯ 4 ಸಿರಿಕೃಷ್ಣ ಪದಕಂಜಭೃಂಗನೆಂದಿನಿಸುವವರ ಹೇಮವರ್ಣತೀರ್ಥರ ಕುವರಸುರನರೋರುಗರೋಳು ಪ್ರಖ್ಯಾತರೆನಿಸುವಅರಿಶರಭ ಭೇರುಂಡನೆನಿಪ ಶ್ರೀಪಾದರಾಯ 5
--------------
ವ್ಯಾಸರಾಯರು