ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ
ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ
ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ
ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ
ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ
ಗೋಪಿ ನಲಿದಳು ಗಾನ ವೇದದ ಸಾಧನೆ 1
ವೈರಿ ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು
ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು 2