ಚಿಂತೆ ಬಿಡಲಿಲ್ಲಾ ಎನ್ನಂತ ತಿಳಿಯಲಿಲ್ಲಾ
ಪಾದ ಕಾಣದೇ ವ್ಯರ್ಥ ಸತ್ತೆನಲ್ಲಾ ಪ
ನೀರಮೇಲಣಗುಳ್ಳೆ ಸಂಸಾರವೆಂಬುವ ಬಳ್ಳಿ
ತೋರಿ ಯಡಗೋದಿಲ್ಲ ಆಧಾರ ಗತಿಗೆ ಅಲ್ಲಿ
ನೀರಜದೆನೆ ನೀರಿನ ಸಂಗ
ಪರಿ ಇರುತಿಹೆ 1
ಹೆಣ್ಣು ಹೊನ್ನು ಮಣ್ಣು ಜೀವ
ಭವ ಪೆಣ್ಣು
ಫಣಿಗಣ್ಣಗೆ ಬಿಡದಿನ್ನು ಬೆಣ್ಣೆ ಜಲವ ಉಣ್ಣದ ಪರಿ
ಕುನ್ನಿ ವಿಷಯಗಣ್ಣಿಸದಿಹೇ 2
ಶುಭಗುಣಗಣ ಹೃದಯ ಎನಗಭಯವೀಯೋ ಸದಯಾ
ಪ್ರಭು ನರಸಿಂಹ ವಿಠಲಯ್ಯಾ ನಿನ-
ಗಭಿನಮಿಸುವೆನಯ್ಯಾ ಸುಭಗ ನಿನ್ನ ಪಿಡಿದೆನಯ್ಯಾ
ಶುಭಕರ ಸಿರಿಮೊಗ ತೋರಯ್ಯಾ 3