ಅ. ಶ್ರೀಹರಿ-ಲಕ್ಷ್ಮಿಯರು
ಉದ್ಧವಾ ಬೇಗ ಬಾ |ಬಾ|
ಶ್ರದ್ಧೆಯಿಂದಿರ್ಪರೆ| ಗೋಪಿಯರೆನ್ನೊಳು ಪ
ಕಾಳಿಯ ಫಣದಲ್ಲಿ ಮೋದದಿಂ ಕುಣಿಯಲು
ಸಾಲು ಸಾಲಾಗಿಯೇ ತವಕದಿಂ ನಿಂತರು 1
ಬೆಣ್ಣೆಯ ಕದ್ದರೂ ಸಣ್ಣ ಮಾತಾಡರು
ಕಣ್ಣು ಕೆಂಪಾಗಿ ತಾವೆಂದಿಗೂ ನುಡಿಯರು 2
ಸುಂದರಾಂಗಿಯಾ ಸೀರೆಯ ಸೆಳೆದರೂ
ನಂದನೊಳೆನ್ನಯ ಸುದ್ದಿಯ ಪೇಳರು 3
ತರುವ ನಾನೇರ್ದರೂ ಸೀರೆಯ ಕದ್ದರೂ
ಕರಗಳ ಜೋಡಿಸಿ ಬೇಡುತ್ತ ನಿಂತರು 4
ಪತಿಗಳ ಶಿಕ್ಷೆಯನ್ನೀಕ್ಷಿಸದೆ ಎನ್ನೊಳು
ರತಿಸುಖಾಂಬುಧಿಯಲ್ಲಿ ತೇಲಿಕೊಂಡಿರ್ದರು 5
ಭಜಿಸಿ ರಾಜೇಶನ ಹಯಮುಖ ದೇವನ
ತ್ಯಜಿಸಿ ಶೋಕಂಗಳ ಸುಖಿಗಳಾಗಿರ್ಪರೆ 6