ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 e್ಞÁನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ