ನಿನ್ನನೇನು ಮರೆಹೊಕ್ಕೆನು ಪ
ನಿನ್ನನೇ ನಾ ಬೇಡ್ವೆನುಅ.ಪ
ದುರಿತ ಶರಧಿ ನಿತ್ಯಾನಂದನೆ 1
ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ 2
ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ 3
ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ 4
ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ 5