ಇಂದ್ರಲೋಕವ ಪೋಲ್ವ ದ್ವಾರಕೆಯಿಂದ ನಮ್ಮನು ಸಲಹಲೋಸುಗಸಿಂಧುವಿನ ಮಾರ್ಗದಲಿ ತೌಳವ ಜನರ ದೇಶಕ್ಕೆಬಂದು ಮಧ್ವಾಚಾರ್ಯರ ಕೈ-ಯಿಂದ ಪೂಜೆಯಗೊಂಬ ಕೃಷ್ಣನಮಂದಹಾಸದ ಮುದ್ದುಮೊಗ ಸೇವಿಪಗೆ ಸಂಪದವು1
ಪಾದ ಮನೋಹರೋರುದ್ವಂದ್ವ ಶ್ರೀಕೃಷ್ಣನ ಮೂರ್ತಿಯ ನೋಳ್ಪರ ನಯನ ಸುಕೃತಫಲ2
ನಿತ್ಯದಲಿ ಗೋಘೃತದ ಮಜ್ಜನಮತ್ತೆ ಸೂಕ್ತ ಸ್ನಾನ ತದನು ಪ-ವಿತ್ರ ಮಂತ್ರ ವಿಚಿತ್ರ ತರವಹ ಕಲಶದಭಿಷೇಕವಸ್ತ್ರಗಂಧ ವಿಭೂಷಣಂಗಳವಿಸ್ತರಿಪ ಶ್ರೀತುಲಸಿ ಪುಷ್ಪದಿಭಕ್ತಿಭರಿತರು ಮಾಡುವಾರಾಧನೆಯನೇನೆಂಬೆ 3
ಸುತ್ತ ಸುಪ್ತಾವರಣದರ್ಚನೆವಿಸ್ತರಿಪ ಸ್ತೋತ್ರಗಳ ಗಾನ ವಿ-ಚಿತ್ರರ ನೈವೇದ್ಯವು ಸುವೀಳೆಯ ಧೂಪ ದೀಪಗಳುರತ್ನದಾರ್ತಿಗಳ ಸಂಭ್ರಮಛತ್ರ ಚಾಮರ ನೃತ್ಯಗೀತಾ-ದ್ಯುತ್ಸವಗಳೊಪ್ಪಿಹವು ದೇವನ ಮುಂದೆ ದಿನದಿನದಿ 4
ಅಪ್ಪಮೊದಲಾದಮಲ ಭಕ್ಷ್ಯವತುಪ್ಪ ಬೆರೆಸಿದ ಪಾಯಸವ ಸವಿ-ದೊಳ್ಪ ಶಾಕಗುಡಂಗಳನು ಕಂದರ್ಪನಪ್ಪನಿಗೆಅರ್ಪಿಸುವರನುದಿನದಿ ರಸ ಕೂ-ಡಿಪ್ಪ ಪಕ್ವಫಲಾದಿಗಳು ರಮೆಯಪ್ಪಿಕೊಂಡಿಪ್ರ್ಪಚ್ಯುತಗೆ ಪೂಜಿಸುವ ಯೋಗಿಗಳು 5
ಸಿರಿ ನೆಲಸಿಹುದು ಶ್ರೀಕೃಷ್ಣನ ಮನೆ ಶೃಂಗಾರ 6
ಶುಭ ವಾಕ್ಯಗಳ ನಮಗೆನಿಷ್ಠಸುಜನರು ತಟ್ಟನೆ ಮನ-ಮುಟ್ಟಿ ನೆನೆವರಿಗಿಷ್ಟ ಅಖಿಳವಕೊಟ್ಟು ಸಲಹದೆ ಸೃಷ್ಟಿಯೊಳು ನೀಗಿಪ್ಪೊ ಗುಣಪುಷ್ಪ 7
ಏನನೆಂಬೆನು ಕೃಷ್ಣ ದೀನರ ದೊರೆಯು ನೀನೆಂದಾದ ಕಾರಣಮಾನವರ ಸುರಧೆÉೀನುತನ ನಿನಗಿಂದು ಸೇರಿತಲಹೀನತೆಯ ಪರಿಹರಿಸಿ ಭಾಗ್ಯಾಂಭೋನಿಧಿಯೆ ನಿಜರ್ಗೀವ ನಿನ್ನ ಮ-ಹಾನುಭಾವದ ಬಲುಮೆಗೆಣೆಗಾಣೆನು ಮಹಾಪ್ರಭುವೆ 8
ಭಾಪು ದಿವಿಜರ ದೇವರಾಯನೆಭಾಪು ಭಜಕರಅಭೀಷ್ಟವೀವನೆಭಾಪು ಹರಿನೀಲೋತ್ಪಲನೆ ಶ್ಯಾಮಲನೆ ಕೋಮಲನೆಭಾಪು ಹಯವದನಾಖಿಲೇಶನೆಭಾಪು ಸುಜನರ ಪಾಪ ನಾಶನೆಭಾಪು ಕೃಷ್ಣಾಲಸತ್ರೈಪಾಲಕನೆ ಬಾಲಕನೆ 9