ವೃಂದಾವನದ ಸೇವೆಯ ಪ.
ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ.
ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1
ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2
ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3
ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4
ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5