ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ
ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ.
ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1
ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2
ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3
ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4
ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5