ಎಂದು ಕಾಂಬುವೆ ನಿನ್ನ ಚರಣ ನಾರಾಯಣತಂದು ತೋರಯ್ಯ ನಾ ಬಂದೆನು ಶರಣ ಪ
ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ 1
ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ 2
ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ವೀರನಾರಾಯಣ 3