ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ