ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ
ಕಥನಕಾವ್ಯಗಳು ಶ್ರೀ ವೆಂಕಟೇಶ ಪಾರಿಜಾತ ಅಧ್ಯಾಯ ಒಂದು ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ: ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ | ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು ಕರಮುಗಿದು ಬೇಡುವೆ ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1 ಸಂತತಿಗೆ ನತಿಸುವೆ ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ ಜಗತಿಯಲಿ ಜನಿಸಿ ಅವರಾ ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2 ಪೊಂದಿ ಆ ಗುರು ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3 ವಚನ ಬುದ್ಧಿ ಪೂರ್ವಕ್ಹಿಂ ಸಂಪೂರ್ಣ ಸರ್ವ ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ ಕೇಳಿ ಪೂರ್ವದಲ್ಲಿ ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು ಇರುವ ನಡೆದನಲ್ಲಿ 1 ನೋಡಿದನು ಆಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲಿ ಜನರು 2 ಪರಿ ಶಾಪ ಮೆಟ್ಟಿದನು ವೈಕುಂಠ ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ ಮುಟ್ಟಿ ಮುನಿ ಪಾದವನು ತುಷ್ಟನಾಗಿ 3 ಧ್ವನಿ ಮೇಲಿಷ್ಟು ಸಿಟ್ಟು ಕಾರಣ ಪೇಳಿಷ್ಟು ತಪ್ಪಿತು ಕ್ಷಮಿಸಿಷ್ಟು 1 ಎಳ್ಳುಕಾಳಷ್ಟು ನೊಂದು ಕೊಂಡಿದ್ದಾವು ಎಷ್ಟೋ 2 ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು ಬರುವುದು ಭಯ ಬಹಳಷ್ಟು ವರದಾನಂತಾ ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3 ವಚನ ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ ಇಂದು ಪಾವಿತನಾದೆನೆಂದು ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ ಕಂಡಂದಳೀ ಪರಿಯು1 ರಾಗ:ಮೋಹನ ಕಲ್ಯಾಣಿ ಆದಿತಾಳ ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ ನಿನ್ಹಿರಿಯತನವೇನು ಪ ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು ಮಾನ್ಯ ವಾಗಿಹುದು 1 ಬಡವ ಬ್ರಾಹ್ಮಣರಿಂದ ನೀ ಕಡೆಗೆ ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ ತಡಮಾಡದೆ ನಾ ನಡದೆ ಗೋವಿಂದಾ 2 ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3 ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ ಇನ್ನಿರಬೇಕೊ 4 ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು ಅಂದಿಗೆ ಎನಗಾನಂದವು ಏನು 5 ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು ವೈರಿಯವರ್ಹೊರತು ಇನ್ಯಾರು 6 ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7 ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ ಮಡದಿಯ ಕಳಕೊಂಡು ತುಡುಗ ನೀನಾದಿ ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8 ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು ಸಿಟ್ಟು ಬಂತೆನಗೆ 9 ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು ಬಲ್ಲಿದನಂತಾದ್ರಿಯೊಳಿರು ನೀನೆ 10 ರಾಗ:ಸಾರಂಗ ಆದಿತಾಳ ಪರಿ ಕಲಹ ಮಾಡಿ ತ್ವರಿತದಿಂದ ನಡೆದಳು ಕರವೀರಪುರಕೆ ಪ ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ1 ದೀನನಾದೆನು ಹಾ ನಾನು ಕಾಣುವೆನೆಂದು ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2 ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು ಬಂದ ತನ್ನಿಂದ ತಾನು3 ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4 ಅಡಗಿದ ಮೆಲ್ಲನೆ ಪೋಗಿ ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ5 ಶಿವನ ಕರುವಿನ ಮಾಡಿ ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು ಕೊಂಡ 6 ನಿತ್ಯ ವರಸಾಧು ಗುಣದಿಂದ ಸರಸಾಗಿ ಕೂಡಿ ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7 ಬಂದ ಕಾರಣವೇನು ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು ಚಂದಾಗಿ ಕರೆವುದು ಬಂದು ಹುತ್ತಿನಲಿ 8 ಹಿಂಡದು ತನ್ನ ಕರುವಿನ ಪರಿ ರಾಜನ ಹೆಂಡತಿಯ ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9 ವಚನ ನೀ ಏನು ಮಾಡುವಿನಿತ್ಯ ಕುಡಿವುದೋ ವತ್ಸ ಏನುಮಾಡು ಪ್ರಾಣಕೊಂಬುವೇನು ತಾನು ಗಾಭರಿಗೊಂಡು ಧ್ಯಾನಿಸುತ ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ 1 ರಾಗ:ದಂತಿ ಆದಿತಾಳ ಅರಿಯೆ ತುರುಗಳ ಕಾಯ್ಕೊಂಡು ಬರುವೆ ನಾ ಇದಹೊರ್ತು ಪ ಕಟ್ಟುವರ್ಯಾರೊ ಅರಿಯೆ ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1 ಪಾಲಾಗುವುದೊ ಅರಿಯೆ ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ ಬೇಡ ವೇಷವ ತಾಳಿ- ಓಡಿಸುತೆ ತುರಗವನು ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ ಜೋಡಾಗು ತನಗೆಂದು - ಗಾಡಿಕಾರರ ಮಾತ ನಾಡಿ ಕ್ರೋಢಾಲಯಕೆ - ಓಡಿಬಂದವನೆ 1 ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶರಾಯನರಮನೆಗೆ ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ ನ್ನಾಯ ಕೈತಂದ ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ - ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3
--------------
ಲಕ್ಷ್ಮೀನಾರಯಣರಾಯರು