ತಾಳಲಾರೆ ರಂಗಯ್ಯ ನಾ ತಾಳಲಾರೆ
ತಾಳಲಾರೆ ಕರುಣಾಳು ರಾಜೇಂದ್ರನೆ
ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ.
ದೇವ ನಿನ್ನ ಪಾದಾಂಬುಜ
ಸೇವೆಯನ್ನು ಭಾವಶುದ್ಧದಿ
ಮಾಳ್ವ ಭಾಗ್ಯ ಪೊಂದಿರಲು ಮೂ-
ದೇವಿ ಎಂದೆನ್ನನು ಮೂದಲಿಸುವ ಮಾತ 1
ಹೇಡಿ ಜನರು ಮನಕೆ ಬಂದಂ-
ತಾಡುತ್ತಿಹರು ರೂಢಿಪ ಮುಖದಿ ನೀ
ಮಾಡುವ ಕೃತ್ಯದ ಪ್ರೌಢಿಮೆಯರಿಯದೆ
ಮೂಢ ಜನರ ಮಾತ 2
ಹೆತ್ತ ಮಗನು ಹಸ್ತಕನಾಗಿ
ಹತ್ತಲಿರಲು ಉತ್ತಮ ಪದವಿಯ
ತೊತ್ತಿನ ಕುವರರಿಗಿತ್ತದು ಸರಿಯೆ ಸ-
ರ್ವೋತ್ತಮ ದೊರೆಯೆ ನಾ 3
ತೋರೊ ಸೂಕ್ತಿ ತಾತ್ಸಾರವ್ಯಾಕ-
ಪಾರ ಯುಕ್ತಿ ಕ್ರೂರ ಮಾನವರಹಂ-
ಕಾರ ಖಂಡಿಸಿ ಮುಖ್ಯ ಧಾರುಣಿ
ಪರೊಳಂತ:ಪ್ರೇರಿಸುವುದು ಶಕ್ತಿ 4
ಲೋಕನಾಥ ನೀನಹುದೆಂಬ-
ದ್ಯಾಕೆ ಗಾಥಾ ಈ ಕಪಟದ ಕೃತ್ಯ
ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ-
ರಾಕು ವೆಂಕಟನಾಥ 5