ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವನಾದ ಮ್ಯಾಲ ತಾನಾರೆಂದರಿಯಬೇಕು ಪ ಅನುಭವಿಗಳ ಕಂಡೆರಗಲಿಬೇಕು | ತನುಮನದಲಿ ನಿಷ್ಠೆಯು ಬಂದಿರಬೇಕು | ತನು ಧನ ಮದದಲಿ ಹೊರತಾಗಿರಬೇಕು | ಉಣಲುಡುವಲಿ ಹರಿಯಚ್ಚರಬೇಕು 1 ಎಲ್ಲಿಂದ ಧರೆಯೊಳು ಜನ್ಮಕ ಬಂದೇ | ಇಲ್ಲ್ಲಿಂದ ಪಯಣವು ಎಲ್ಲಿಗೆ ಮುಂದೇ | ಎಲ್ಲ ವಿಚಾರಿಸು ಗುರು ಮುಖದಿಂದಾ | ಫುಲ್ಲನಾಭನೆ ಸೇರಿ ಬದುಕಬೇಕೆಂದ 2 ತನ್ನ ತಾ ಮರೆದು ನೀ ತಿರುಗಲಿ ಬೇಡಾ | ಅನ್ಯರ ನಿಂದ್ಯಪಸ್ತುತಿ ಮಾಡಬೇಡಾ | ಚನ್ನಾಗಿ ಶಾಂತಿಯ ನೆಲೆಬಲಿ ಬೇಡಾ | ಕಣ್ಣಿದ್ದು ಕುರುಡ ನೀನಾಗಲಿ ಬೇಡಾ 3 ಏನು ತೋರುವದೆಲ್ಲಾ ಹರಿಯಾಜ್ಞೆದೆಂದು | ನಾನೇನು ಕರ್ತನಲ್ಲಿದಕೆಂದು | ಅನುಭವದಲಿ ಸಮದೃಷ್ಠಿಗೆ ಬಂದು | ಘನ ಗುರು ಪಾದಕ ಭಾವದಿ ಹೊಂದು 4 ಹೊತ್ತು ಹೋಗದ ಮಾತ ನಾಡಲೀ ಬೇಡಾ | ಮುತ್ತಿನಂಥಾ ಜನ್ಮ ದೊರಿಯದುಗಡಾ | ಸತ್ಯಜ್ಞಾನಾಮೃತ ನುಂಡವ ಪ್ರೌಢಾ | ಕರ್ತ ಮಹಿಪತಿ ಸುತ ಸುರಿದ ನೋಡಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
--------------
ಪ್ರಸನ್ನವೆಂಕಟದಾಸರು