ಮಾತು ಆಡುವೆ ಯಾತಕೆ ಮನವೆ ನೀ
ಸೋತು ಸುಮ್ಮನಿರು ಜೋಕೆ ಪ
ಮಾತು ಆಡುವೆ ಯಾಕೆ ಮಮತಾ ಅಹಂಕಾರದಿ
ಶ್ರೀತರುಣಿವರನ ಸಿರಿನಾಮವಿಲ್ಲದೆ ಅ.ಪ
ಕಾಯ ಅಸ್ಥಿರವೆನ್ನದೆ | ಇಹ ಪರಕೆ ಸ-
ಮಾಯವಾದಗಳಾಡೆ ಬಾಯಿ ನೋವಲ್ಲದೆ 1
ವೇದ ಪುರಾಣವಿಲ್ಲ | ಶಾಸ್ತ್ರವೆ ಬ್ರಹ್ಮ-
ವಾದವೇ ಮೊದಲೇಯಿಲ್ಲಾ
ಸಾಧನೆಯೆಂಬುವದು ಲೇಶಯಿದರೊಳಿಲ್ಲಾ
ಹಾದಿಹೋಕರ ಕೂಡಿ ಪ್ರೌಢನು ನಾನೆಂದು 2
ಹರಟೆ ಹರಟೆ ಮೋದಿಸಿ
ಪರಗತಿ ಚಿಂತೆ ಬಿಂದು ಮಾತ್ರವು ಕಾಣೆ
ಹರಿವ ನೀರೊಳು ಬೂದಿಹಾಕುವಂದದಿ ವ್ಯರ್ಥ 3
ಒಂದಕ್ಕೊಂದ್ಹೆಚ್ಚಿಸುತ | ಶುಷ್ಕವಾದ-
ದಿಂದ ಕಾಲವ ಕಳೆಯುತ
ನಿಂದಿಸಿ ಪರರ ಸ್ವಯೋಗ್ಯತೆ ತಿಳಿಯದೆ 4
ಬಲ್ಲೆನಾ ಬಿಡು ಎಂಬುವೆ | ಸದಾ ಒಬ್ಬ-
ಪುಲ್ಲಲೋಚನ ಗುರುರಾಮವಿಠಲನ ಕಾಣ-
ಲಿಲ್ಲ ಶೋಧಿಸಿ ತಿಳಿಯಲಿಲ್ಲ ಬರಿದೆ ಬಾಯಿ 5