ದೋರನು ಬ್ರಹ್ಮಾದಿಕರಿಗೆ ಪ
ದುಷ್ಟತನವ ಮಾಡಲು ಮನಿಮನಿ ಪೊಕ್ಕು|
ಸಿಟ್ಟಿಲೆ ಕಣ್ಣಿಲೆ ಚರಣವನು|
ಕಟ್ಟಲು ಒರಳನೆಳೆದುಕೊಂಡು ಹೋಗಿ|
ನೆಟ್ಟನೆರಡಮರಕೆಡಹಿದ ಕೃಷ್ಣಾ 1
ಮಣ್ಣವನುಂಗಲು ಮುಳಿಯಲು ಗೋಪಿ|
ಚಿಣ್ಣರ ಕೇಳೆ ನಾನಿಲ್ಲೆನುತ|
ಸಣ್ಣ ಚೆಲುವಾ ಬಾಯಾ ನೋಡೆಂದು ತೆರೆದು ತಾ|
ಉನ್ನಂತ ಬ್ರಹ್ಮಾಂಡ ದೋರಿದಾ ಕೃಷ್ಣಾ2
ನೋಡು ಬಾಲಕ ರೂಪ ತಾನಾಗಿಹಾ|
ಪ್ರೌಢತನದಿ ಕೊಳಲನೂದಿ|
ರೂಢಿಲಿ ಗೋಪಿಕ ಮನಸೆಳೆದು ನಲಿ|
ದಾಡುವ ಮಹಿಪತಿ ಸುತಪ್ರಿಯ ಕೃಷ್ಣಾ3