ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ
ಕೃಷ್ಣನ ದಯಬೇಕೋ ದೇವ ಅ.ಪ
ಸಾಸಿರ ಬಂದರೆ ಶಾಂತಿಯೆಂದರಿತೆನೊ
ಸಾಸಿರ ಬಂದಿತು ಶಾಂತಿ ಕಾಣಲಿಲ್ಲ
ಸಾಸಿರ ಸಾಸಿರವೇಸು ಬಂದವೋ
ಕ್ಲೇಶವು ಏರಿತು ಮೋಸಹೋದೆನೊ 1
ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ
ಕೇಳುವುದಿಲ್ಲವೊ ನಾಳಿನ ಕೂಳನು
ಕಾಲಕಾಲಕೆ ಹುಲಿ ಹಾಲನು ತರುತಿಹ
ಬಾಲಗೋಪಾಲನ ಕೇಳಿ ಮೋಸಹೋದೆ 2
ಬೇಡವೆನ್ನುವರಿಗೆ ನೀಡುವ ದೊರೆ ನೀ
ರೂಢಿಯ ಬಲ್ಲೆನೋ ಕಾಡುವುದಿಲ್ಲವೊ
ನೀಡಿದ ಭಾಗ್ಯವು ಕೇಡುತರದೆ ಕಾ
ಪಾಡಬೇಕೆಲೊ ಪ್ರೌಢÀ ಪ್ರಸನ್ನನೆ 3