ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ |
ನೀರಜ ಶರಪತಿ ಕಾಣಮ್ಮಾ ಪ
ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ-
ಪುರ ನೂಪುರದ ಲೊಪ್ಪುವನವದಾರಮ್ಮಾ |
ಸರಸಿಯೊಳಗಪೊಕ್ಕು ತಮನಸುವ ಬಗೆದು |
ವರಶೃತಿ ತಂದವ ಕಾಣಮ್ಮಾ 1
ಕಲಿ ದಶನಂದದಿ ಜಂಘೆ ಪೊಂಬಾಳೆಯ |
ಪರಿಯ ತೊಡೆಯುಳ್ಳುವ ದಾರಮ್ಮಾ |
ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು |
ಭರದಿ ಬೆನ್ನೆವಿತ್ತವ ಕಾಣಮ್ಮ2
ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ
ಮಿಂಚಿನ ಘಂಟೆಯ ದಾರಮ್ಮಾ |
ಕ್ಷಿತಿ ವಯ್ದದನುಜನ ಶೀಳಿ ವಿ |
ರಂಚಿ ಗುಳಹಿದವ ಕಾಣಮ್ಮಾ3
ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ |
ಉರಸಿನ ವತ್ಸನವ ದಾರಮ್ಮಾ |
ನರಹರಿ ರೂಪದಿ ಹಿರಣ್ಯಕನನು ಕೊಂದು |
ಶರಣನ ಕಾಯ್ದವ ಕಾಣಮ್ಮಾ4
ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ |
ಹಸ್ತ ಕಡಗದವ ನಾರಮ್ಮಾ |
ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ |
ಸ್ವಸ್ತಿ ಮಾಡಿವನು ಕಾಣಮ್ಮಾ5
ಕ |
ಪೋಲ ಹೊಳಹಿನವ ದಾರಮ್ಮಾ |
ಏಳು ಮೂರು ಬಾರಿ ಕ್ಷತ್ರಿಯ ರಾಯರ
ಸೋಲಿಸಿ ಬಂದವ ಕಾಣಮ್ಮಾ6
ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ |
ತೋರ್ಪ ನಾಶಿಕದವ ದಾರಮ್ಮಾ |
ದರ್ಪ ಮುರಿದು ರಾವಣನ ತಲಿಯ ಧರೆ |
ಗೊಟ್ಟಿಸಿದವ ನಿವ ಕಾಣಮ್ಮಾ7
ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು |
ಪೊಡವಿಯೊಳಗ ನಂಬಿದ್ದ ಪಾಂಡವರನು |
ಬಿಡದೆ ಸ್ಪಾಪಿಸಿದವ ಕಾಣಮ್ಮಾ8
ಕುರುಳು ಗೂದಲು ತಳಕದ ಮಾಲ್ಯ ಮೌಲಿಕ |
ಧರಸಿದ ಮುಕುಟವ ದಾರಮ್ಮಾ |
ತರಳನಾಗಿ ಮುಪ್ಪುರ ನಾರಿಯರ ವೃತ |
ತ್ವರಿತದಿ ಅಳಿದವ ಕಾಣಮ್ಮಾ9
ನೋಡಲು ಮನಸಿಗೆ ಮೋಹನೆ ಮಾಡುವ |
ಪ್ರೌಡದಿ ಮನವವ ದಾರಮ್ಮಾ |
ರೂಢಿಲಿ ಕುದುರೆಯ ಏರಿ ಕಲಿಮಲವ |
ಝಾಡಿಸಿದವನಿವ ಕಾಣಮ್ಮ10
ಸಹಜದಿ ಸವಿಸವಿ ಮಾತಲಿ ಸೋಲಿಸು |
ತಿಹ ಸರ್ವರಿಗಿವ ದಾರಮ್ಮಾ |
ಮಹಿಪತಿ ಸುತನ ಹೃದಯದಲಿ ನಿಂತು ತನ್ನ|
ಮಹಿಮೆ ಬೀರಿಸುವವ ಕಾಣಮ್ಮಾ11