ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಕರ್ಷಣ ಜಯಾತನಯಗೆ ಮಂಗಳ ಕಂತು ಭವನ ಪದವಿಯೋಗ್ಯಗೆ ಶಂಕ ಇಲ್ಲದ ಜೀವರಾಶಿಗಳೊಳಗಚ್ಯು ತಾ ಕಸ್ಥನೆನಿಸಿದ ಪವಮಾನಗೆ 1 ವಾನರ ವೇಷನಾ ತೋರ್ದಗೆ ಮಂಗಳ ಭಾನುತನಯನ ಕಾಯ್ದ್ದಗೆ ಮಂಗಳ ಜಾನಕಿಗುಂಗುರವಿತ್ತಗೆ ಮಂಗಳ ದಾನವತತಿ ಪುರವ ದಹಿಸಿದವಗೆ ಮಂಗಳ 2 ಅತಿ ಬಲವಂತರೆಂದೆನಿಸಿದ ದೈತ್ಯ ಸಂ ತತಿಗಳನೆಲ್ಲವ ಸವರಿದವಗೆ ಮಂಗಳ ಪ್ರೋತನದೊಳಗೆ ಪ್ರತಿಕೂಲ ಸುಯೋಧನನ ಮೃತಿಗೆ ಕಾರಣನಾದ ಮರುದಂಶಗೆ 3 ಏಳೇಳು ಲೋಕದ ಗುರುವರನೆನಿಸಿ ಮೂ ರೇಳು ಕುಭಾಷ್ಯವ ಮುರಿದವಗೆ ಮಂಗಳ ಏಳುಕೋಟ ಲೋಕದೊಳಗಿಟ್ಟು ದೈತ್ಯರ ಪಳದಂತೆ ಮಾಡಿದ ಯತಿರಾಯಗೆ 4 ಮೂರು ರೂಪಗಳಿಂದ ಮುಕ್ತಿ ಪ್ರದಾಯಕ ನಾರಾಧಿಸಿದ ಅನಿಮಿಷ ಪೂಜ್ಯಗೆ ಮಂಗಳ ಶ್ರೀ ರಮಾರಮಣ ಜಗನ್ನಾಥ ವಿಠಲನ ಕಾರುಣ್ಯ ಪಾತ್ರ ಸಮೀರಣಗೆ ಮಂಗಳ 5
--------------
ಜಗನ್ನಾಥದಾಸರು