ಸ್ಮರಿಸು ಗುರು ಸಂತತಿಯನು ಮನವೇ ಪ
ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ.
ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ
ಪರಮೇಷ್ಠಿ ತತ್ಸುತರು ಸನಕಾದ್ಯರಾ
ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ
ಕೈವಲ್ಯ ಯತಿವರರ 1
ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ
ಸೂನು ಸುತಪೋರಾಜ ವರಕುಮಾರಾ
ಅಚ್ಯುತ ಪ್ರೇಕ್ಷರಂಘ್ರಿಗಳ
ಆ ನಮಿಪೆನನವರತ ಭಕ್ತಿ ಪೂರ್ವಕದೀ 2
ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ
ಪ್ರೋಚ್ಚಾಬ್ಜನಾಭ ನರಹರಿ ಮಾಧವಾ
ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ
ತೋಚ್ಛಾಟನವಗೈದ ಜಯತೀರ್ಥ ಗುರುವರರ 3
ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ
ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ
ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ
ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4
ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ
ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ
ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು
ಭಿಕ್ಷುಗಳ ಜಗನ್ನಾಥ ಗುರುಗಳನಾ 5
ಮೂರ್ತಿ ವಿ
ಶ್ರೀನಾಥ ಗುರುವರರ ಕರಕಮಲಜಾತ ವಿ
ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6
ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ
ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ
ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ
ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7
ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ
ವಾರಿಧಿ ರಾಘವೇಂದ್ರಾರ್ಯರಾ
ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ
ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8
ಸಾಧುಜನಸನ್ನುತ ಉಪೇಂದ್ರರಾಯರ ವೇದ
ವೇದಾಂಗ ಚತುರ ವಾದೀಂದ್ರ ಯತಿಯಾ
ದ್ಯಾದಾನಾಸಕ್ತ ವರದೇಂದ್ರ ಯತಿವರರ 9
ರಾಮವೇದವ್ಯಾಸರಂಘ್ರಿ ಕಮಲಗಳ ಹೃ
ತ್ತಾಮರಸದೊಳು ಪೂಜಿಸಿದ ಬಗೆಯನ್ನು
ಧೀಮಂತರಿಗೆ ತಿಳಿಸಲೋಸುಗದಿ ನವರತ್ನ
ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10
ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ
ಭವ ಗೆದ್ದಾ ಸುಬೋಧ ಸುಜನೇಂದ್ರರಾ
ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ
ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11
ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ
ತ್ಪರಿಹಾರಗೈಸುವುದು ಗುರುಗಳ ಸ್ಮರಣೇ
ಪರಮ ಸೌಖ್ಯವನೀವದಾದಾವ ಕಾಲದಲಿ
ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12
ನವ ವೃಂದಾವನ