ದಿನಗಳ ಕಳೆವುದೆ ಸಾಧನವು
ಶ್ರವಣ ಮನನ ನಿಧಿಧ್ಯಾಸನಗಳಲಿ ಪ
ಉದಯದಿ ಸ್ನಾನ ನದಿನದಗಳಲಿ
ಸದಮಲ ಹರಿಯ ಪಾದೋದಕ ಪಾನ
ಹೃದಯದಿ ಕೃಷ್ಣನ ಮೂರ್ತಿಯ ಧ್ಯಾನ
ವಿಧಿಯಲಿ ಜಪತಪ ಪ್ರವಚನಗಳಲಿ 1
ಪ್ರೇಷ್ಟತಮರ ತಂತ್ರಸಾರದ ಕ್ರಮದಲಿ
ಅಷ್ಟಮಹಾ ಮಂತ್ರಗಳನು ಜಪಿಸಿ
ವೃಷ್ಣಿವರೇಣ್ಯನ ವೈಭವದಿಂದಲಿ
ತುಷ್ಟಿಗೊಳಿಸಿ ಬಲು ಶಿಷ್ಟರ ಸಂಘದಿ 2
ತ್ರಿಭುವನ ಗುರುಗಳ ಶುಭಕರ ಶಾಸ್ತ್ರವ
ಪ್ರವಚನಗೈಯುತ ಪ್ರತಿಕ್ಷಣಗಳಲಿ
ವಿಬುಧ ಪ್ರಸನ್ನನ ಗುಣಗಳ ಸಜ್ಜನ
ಸಭೆಯಲಿ ಪಾಡುತ ನಿರ್ಭಯರಾಗಿ 3