ಭಕ್ತಾಧೀನಹರೇ ಭಕ್ತಾಧೀನ ವಿರಕ್ತ ವಿನೋದನ
ಭುಕ್ತಿಮುಕ್ತಿದ ಸರ್ವಶಕ್ತಿ ನೀ ದಯವಾಗು ಪ.
ಚಂಚಲ ಮನದಿ ಪ್ರಾಪಂಚಿಕ ಸುಖದಾಸೆ
ಮಿಂಚಿ ಸಂಸ್ಕøತಿಯಲಿ ಸಂಚರಿಸಿ
ಮುಂಚಿನ ಭವಗತ ಸಂಚಿತವರಿಯದೆ
ಹಂಚಿಗು ಕಡೆಯಾದೆ ಪಂಚಾತ್ಮನ ನೆನೆಯದೆ 1
ಘೋರ ಸಂಸ್ಕøತಿ ಪಾರ ವಾರುಧಿ ಮುಳುಗ್ಯಾಡಿ
ಪಾರುಗಾಣದೆ ಬಹು ಗಾರಾದೆನು
ಶ್ರೀರಮಣನೆ ನಿನ್ನಾಧಾರವಲ್ಲದೆ ಮುಂದೆ
ಕಂಸಾರಿ ನೀ ಕೃಪೆದೋರು 2
ಭವ ವಾಯು ಗಿರೀಶಾದಿ ದಿವಿಜರ
ನಿರತ ಪ್ರೇರಿಸುವಂಥ ದೊರೆಯೆ ನಿನ್ನ
ಸ್ಮರಿಸುವೆ ಪರಿವೃತಾಂತರ ನಿಯಾಮಕ ಲಕ್ಷ್ಮೀ-
ವರ ವೆಂಕಟಾದ್ರೀಶ ನಿರುಪಧಿ ಕರುಣಿಸು 3