ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ. ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ ಕಾಲ ಕಾಮಿತಫಲಪ್ರದಾಯಕ ಅ.ಪ. ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ 1 ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2 ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ3 ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4 ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ ಮಿಂಚಿಯೆನ್ನೊಳು ಮೋದಿಸಿ ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ5 ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6 ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ ಪಡುತಿರುಪತಿ ಪುರೇಶನೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ ಪ. ಎಂಟಕ್ಷರ ನುತನೆ ಎಂಟು ರೂಪಾತ್ಮಕನೆ ಎಂಟು ಮೂರು ತತ್ವ ನಿರ್ಮಿಸಿಹನೆ ಎಂಟು ದಳದಲಿ ನಿಂತು ಎಂಟು ವಿಧ ಪ್ರೇರಿಸುತ ಎಂಟು ದಿಕ್ಪತಿಗಳಿಂ ಸೇವೆ ಕೊಳುತಿಹನೆ 1 ಎಂಟು ವಿಧ ಕರ್ತೃವೆ ಎಂಟು ಭಾಗ್ಯಯುತನೆ ಎಂಟು ಬಾಹು ಎಂಟು ಆಯುಧಧರನೆ ಎಂಟು ಪತ್ನಿಯರಿಂದ ಎಂಟನೇ ಅವತಾರಿ ನೆಂಟರೊಡನೆ ಜಗದ ಕಂಟಕರ ಸದೆದನೆ 2 ಎಂಟೆರಡು ಕಲೆಪೂರ್ಣ ವೆಂಕಟರಮಣನೆ ಎಂಟು ವಿಧ ಮದಗಳನು ಭೇದಿಸುತಲಿ ಎಂಟೆರಡು ಒಂದು ಇಂದ್ರಿಯ ನಿನ್ನ ಕಡೆ ಮಾಡಿ ಭಂಟನೆನಿಸೆನ್ನ ಶ್ರೀ ಗೋಪಾಲಕೃಷ್ಣವಿಠಲ3
--------------
ಅಂಬಾಬಾಯಿ
ಯುಕ್ತಿ ಯುಕ್ತದಮಾತ ಕೇಳಬೇಕುಶಕ್ತಿಯನು ಮಾಡದಿರು ಮುಕ್ತಿಗನುವಾಗು ಪಚಿತ್ತಶುದ್ಧಿಯಲಿದ್ದು ಭಾವ ವಿಷಯದಿಕೂಡೆಮತ್ತೆ ಬಂಧಿಸಿ ಬಲಿದು ಮುಳುಗುತಿಹುದುಕಿತ್ತದನು ನಿಜದಲ್ಲಿ ನಿಲಿಸಿಯನುಸಂಧಾನವತ್ಯಧಿಕವಾದಡೆಯು ಮಿತನುಡಿ ಹಿತವೂ 1ಕಾರ್ಯಕಾರಣರೂಪನಾಗಿ ಜಗದೀಶ್ವರನುಧೈರ್ಯಗಳು ಬರುವಂತೆ ಪ್ರೇರಿಸುತ್ತಾಆರ್ಯರೊಳಗೆಣಿಕೆಯನು ಮಾಡಿಸುತಲಜ್ಞಾನಸೂರ್ಯನಾಗಿಯೆ ತಾನು ತೋರುತಿರ್ದಡೆಯೂ 2ಕರಣೇಂದ್ರಿಯಂಗಳಿವು ಜಡವಾಗಿ ವಿಷಯಗಳಬೆರೆಸಲರಿಯವು ತಾವು ಇಚ್ಛೆುಂದಾತಿರುಪತಿಯ ವೆಂಕಟನು ಸೂತ್ರಧಾರಕನಾಗಿಗುರುವಾಸುದೇವ ರೂಪದಿ ಸಲಹುತಿರಲು 3ತನುವನುಕೂಲಕೆ ಬಂದುದ ನೆನೆದುಸುರಿದ ಜೀವನಭಿಮಾನವ ಸಡಿಲಿಸುತಲಿ ವಿನಯದಿ ಗುರುವನು ಸೇರ್ವರೆ ನಿನಗೆರವಿಲ್ಲೆನ್ನುತಅನುಸರಿಸಿದ ಕಾರ್ಯವಾಸಿಗೋಸುಗ ಬಿಡದೆ 4
--------------
ತಿಮ್ಮಪ್ಪದಾಸರು
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ 1 ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ ಶರಧಿ ನಾರಾಯಣ 2 ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ ಶೂನ್ಯ ಮಾಧವ 3 ವಿನುತ ಸಾರ ವೇದಬಲ್ಲ ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ 4 ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ 5 ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ ಬಾಧೆ ಹರಿಸು ಮೂರು ವಿಧಧ ಮಧುಸೂದನ 6 ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ 7 ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ 8 ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ 9 ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ 10 ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ ಉದರದಲ್ಲಿ ರಜ್ಜುಭಂಧ ದಾಮೋದರ 11 ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ ಶರಧಿ ಶಯನ ಪದ್ಮನಾಭನೆ12 ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ 14 ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ 15 ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ ಕೃಪಣ ಕ್ಷಮಿಸು ಅನಿ-ರುಧ್ಧನೆ 16 ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು ವರನು ಭಿನ್ನ ಉಭಯರಿಂದ ಪುರುಷೋತ್ತಮ 17 ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ18 ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ ಈಶಬಿಂಬ ಜೀವ ಹೃಸ್ಥ ನಾರಸಿಂಹನೆ 19 ಜೀವರೊಡನೆ ವಿತತ(ಇರುವೆ) ಅಚ್ಯುತ 20 ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ 21 ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ 22 ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ 23 ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ 24 ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ 25
--------------
ಕೃಷ್ಣವಿಠಲದಾಸರು
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ.ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀಲೋಲಮೋಹನಲೀಲದುರ್ಜನಕಾಲಕಾಮಿತಫಲಪ್ರದಾಯಕಅ.ಪ.ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದಪರಿಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿಬನ್ನಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನುಹರಿ1ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನುಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನುಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನುಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ 3ವೀರ ವೈಷ್ಣವ ಮಾರ್ಗದೊಳು ಸಂಚಾರ ಮಾಡುವ ತೆರದಲಿಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿಭೂರಿಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹಗೃಹಗೈದಿಸಿಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿವಂಚಿಸುವ ಬಂಧುಗಳ ಮನವನುಮಿಂಚಿಯೆನ್ನೊಳು ಮೋದಿಸಿಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ 5ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆಲೋಲಲಕ್ಷ್ಮೀನಾರಾಯಣಾಶ್ರಿತಪಾಲಪಡುತಿರುಪತಿ ಪುರೇಶನೆ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ