ಎನ್ನಪರಾಧವೇನು ನಿನ್ನ ಸೂತ್ರಾಡಿಸಿದ್ಹಾಂಗ ಆಡುವೆ ಹರಿ ಧ್ರುವ
ಆಡಿಸಿದರಾಡುವೆ ನೋಡಿಸಿದರೆ ನೋಡುವೆ
ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗ 1
ನಡೆಸಿದರ ನಡೆಯುವೆ ಕೂಡಿಸಿದರ ಕೂಡುವೆ
ನುಡಿಸಿದರೆ ನುಡಿಯುವೆ ಚೇತರಿಸಿದಂತೆ 2
ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ
ಇಡಿಸಿದರೆ ನಾ ಇಡುವೆ ಸರ್ವಭೂಷಣ 3
ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ
ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ 4
ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗ 5
ನೇಮಿರೆ ನೀವಂದು ನಾ ಮಾಡುವದಿನ್ನೊಂದು
ನಿಮಿತ್ಯಮಾಡಿದೋರುದು ಸೋಜಿಗಿದೊಂದು 6
ಎನ್ನ ಬಾಹ್ಯಂತ್ರ ಪೂರ್ಣ ಚನ್ನಾಗಿರೆ ನೀ ಕರುಣ
ಅನುದಿನ 7