ಉರಗೇಂದ್ರನಿಗೂ ಅಳವಲ್ಲ ಪ
ಸೂರಿದಾಸನಿಗೆ ಅಳವಹುದೇನೋ ಅ.ಪ
ನೀನವತರಿಸಲು ಯೋಚಿಸುತೇ
ಅಜ್ಞಾನವನಿತ್ತೆ ನೀ ಜಯವಿಜಯರಿಗೆ 1
ಭವಬಂಧನ ಪಡೆಯುವ ಪರಿಗೈದೆ
ನಂದಿಸಿ ಮೆರೆಯುವ ತೆರಗೈವೆ 2
ಹಿರಿಯ ಹಿರಣ್ಯಕ ಧರೆಯ ಕೊಂಡೊಯ್ಯೆ ಸೂ
ಕರ ರೂಪವನಾಂತು ವಧೆಗೈದೆ
ಕಶಿಪು ವರಗಳ ಪಡೆವಂತೆ ಪ್ರೇರಿಸಿದೆ3
ನರಖಚರಾಸುರ ಹರಿಹರರಿಂದೆ
ದುರುಳ ಹಿರಣ್ಯಕ ವಾರಿಜಭವನಿಂದೆ4
ಪರಿಪರಿ ಶಿಕ್ಷೆಯ ವಿಧಿಸಲವು
ಕರುಣೆಯ ತೋರ್ದವು ನಿನ್ನ ಮಹಿಮೆಯಿಂದಾ 5
ಕರವಾಳದಿ ಸಂಹರಿಸುವೆನೆಂದು
ನರಮೃಗ ರೂಪದಿ ಬಂದೆ ನೀ ತಂದೆ6
ಬಾಗಿಲ ಹೊಸಲಿನಲಿ
ಪಿಡಿದೆತ್ತಿದೆಯಯ್ಯ ಮಾಂಗಿರಿಯರಸ 7