ಕ್ಷೇತ್ರ ದರ್ಶನ
ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ
ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ.
ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1
ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2
ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3
ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4
ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5
ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6
ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7
ತೀರ್ಥ ಕ್ಷೇತ್ರ ಮಾಲಾ
1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-