ಉಮಾ ಹಿಮಗಿರಿ ಸಮಸ್ತ
ಸಮಾನ ಸುಗುಣವಂದ್ಯೆ ಪ
ಕಮಲಾಕ್ಷನÀ ಭಗಿನಿಯೆನ್ನಮಲನ ಮಾಡಿ
ವಿಮ¯ ಮನಸು ಶಮದಮಗಳ ನೀಡಮ್ಮ ಅ.ಪ.
ತ್ರಿಪುರ ಸುಂದರಿ ನಿನ್ನ ಅಪಾರ ರೂಪಕೆ
ತ್ರಿಪುರಾರಿ ಮರುಳಾದನಮ್ಮ
ಶಫರಾಕ್ಷಿ ಕೇಳೆನ್ನ ಬಿನ್ನಪವನು ಮನ
ಚಪಲಾಕೆರಗದಂತೆ ಕೃಪೆ ಮಾಡಬೇಕಮ್ಮ 1
ಜಪವ ನಾನರಿಯೆನು ತಪವ ನಾನರಿಯೆನು ಎ
ನ್ನಪರ ಬುದ್ಧಿಯ ಬಿಡಿಸಮ್ಮ
ಕೃಪಣ ವತ್ಸಲೆ ಎನ್ನ ಕುಪಥಾವ ತಪ್ಪಿಸಿ
ಅಪವರ್ಗ ಸೇರುವ ಸುಪಥವ ತೋರಮ್ಮ 2
ಅಪ್ಪ ರಂಗೇಶವಿಠಲ ಒಪ್ಪುವ ರೀತಿಲಿ
ತಪ್ಪದೆ ಮತಿ ಪ್ರೇರಿಸಮ್ಮ
ತಪ್ಪು ಒಪ್ಪುಗಳೆಲ್ಲ ಸರ್ಪಶಯನಗೆಅರ್ಪಿಸಿ ಎನ್ನ ನಿರ್ಲಿಪ್ತನ ಮಾಡಿಸಮ್ಮ 3