(ಎ) ಹರಿದಾಸವರ್ಗ
ಏನು ಸುಖವೊ ಎಂಥಾ ಸುಖವೊ ಹರಿಯಧ್ಯಾನ ಮಾಡುವರ ಸಂಗ ಪ
ತಂಬೂರಿ ಮೀಟುತ ದ್ವಯಅಂಬಕದಿ ಬಾಷ್ಪ ಬಿಂದುತುಂಬಿ ಆನಂದದಿಂದಸಂಭ್ರಮವಾಗಿಹರ ಸಂಗ 1
ಗೆಜ್ಜೆಯ ಕಾಲಲ್ಲಿ ಕಟ್ಟಿಲಜ್ಜೆಬಿಟ್ಟು ಹರಿಯ ನಾಮಗರ್ಜನೆ ಮಾಡುತ್ತ ಅಘ-ವರ್ಜಿತರಾಗಿಪ್ಪರ ಸಂಗ 2
ಪುಷ್ಪದಿ ಸುಗಂಧ ಹ್ಯಾಗೆಇಪ್ಪುದೊ ತದ್ವತು ಜಗ-ದಪ್ಪ ಬ್ರಹ್ಮಾದಿಗಳೊಳಗಿಪ್ಪನೆನ್ನುವರ ಸಂಗ 3
ತುಚ್ಛ ವಿಷಯವ ತೊರೆದುನಿಶ್ಚಲ ಭಕುತಿಯಿಂದಅಚ್ಯುತಾನಂತನ ಪಾದಮೆಚ್ಚಿಸಿದವರ ಸಂಗ4
ದರ್ವಿಯಂತೆ ಜೀವವನ್ನುಸರ್ವತ್ರ ತಿಳಿದು ಶೇಷಪರ್ವತವಾಸನ ಕಂಡುಉರ್ವಿಯೋಳಿಹರ ಸಂಗ 5
ನಡೆವುದು ನುಡಿವುದುಕೊಡುವುದು ಕೊಂಬುವುದುಒಡೆಯನ ಪ್ರೇರಣೆಯೆಂದುನುಡಿದು ಹಿಗ್ಗುವರ ಸಂಗ 6
ಸಿರಿ ಕೃಷ್ಣ-ಗಿಷ್ಟರಾಗಿಪ್ಪರ ಸಂಗ7