ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಗಶಯನ ವರಯೋಗಿ ನಿಕರಪ್ರಿಯ ಬಾಗಿದೆ ಶಿರ ಅನುರಾಗದಿ ನೋಡೆಲೊ ಪ ಆಗ ನಿನ್ನ ಮರೆತೆನೆಂದು ಈಗ ಎನ್ನ ಮರೆಯದಿರೆಲೋ ಅ.ಪ ಶ್ರೀರಮಣ ನಿನ್ನ ಪ್ರೇರಣೆಯಿಲ್ಲದೆ ಯಾರು ನಡೆಯುವರು ಈ ಧರೆಯೊಳಗೆ ಕಾರಣ ಕಾರಣ ನಿನ್ನೊಳಗೆ ಮನ ಸೇರಿಸಿ ಪೊರೆಯೋ ಸಮೀರಸಖ 1 ಸುಂದರರೂಪ ಮುಕುಂದ ಪರಾತ್ಪರ ಸಿಂಧುಶಯನ ನಿನ್ನ ಶುಭಗುಣಗಳಲಿ ಸಂದೇಹ ಬಾರದೆ ಕರುಣಿಸೆಲೋ ಮುಚು ಕುಂದ ವರದ ಗೋವಿಂದ ಹರೇ 2 ನಿನ್ನ ಕರುಣದಿಂದ ಕಣ್ಣು ತೆರದಿಹೆನೊ ಪೂರ್ಣವಿಮಲ ಸುಖ ಜ್ಞಾನ ಸುಕಾಯ ಮಾನ್ಯ ಪ್ರಸನ್ನ ಸದಾ ಪೊರೆಯೋ ಸರ್ವ ಭಿನ್ನ ಸಮೀಚೀನ ಸುಖವೀಯೊ 3
--------------
ವಿದ್ಯಾಪ್ರಸನ್ನತೀರ್ಥರು