ಗುರು ಮಧ್ವೇಶ ವಿಠಲ | ಪೊರೆಯ ಬೇಕಿವಳ ಪ
ಪರಮ ಭಕುತಿಲಿ ನಿನ್ನ | ದಾಸ್ಯ ಕಾಂಕ್ಷಿಪಳ ಅ.ಪ.
ಹರಿಗುರೂ ಸದ್ಭಕ್ತಿ | ಹಿರಿಯರಲಿ ಅಸಕ್ತಿನಿರುತ ಕರುಣಿಸಿ ಇವಳ | ಪೊರೆಯೊ ಹರಿಯೇ |ಅರುಹ ಲೇನಿಹುದಿನ್ನು | ಸರ್ವಜ್ಞ ನೀನಿರುವೆಕರುಣದಲಿ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ 1
ಕೃದ್ಧಖಳ ಜನರನ್ನು | ಪ್ರಧ್ವಂಸ ಮಾಡುತಲಿಬುದ್ಧಿಯೊಳು ನೀ ನಿಂತು | ವಿದ್ಯೆ ಪ್ರದನಾಗೋಮಧ್ವಮತ ಪದ್ಧತಿಗಳುದ್ಧರಿಸಿ ಇವಳಲ್ಲಿಪದ್ಮನಾಭನೆ ಪೊರೆಯೊ | ಮಧ್ವಾಂತರಾತ್ಮಾ 2
ಕಂಸಾರಿ ಹರಿಯೇ 3
ನಿನ್ನ ಪ್ರೇರಣೆಯಂತೆ | ಕನ್ಯೆಗಂಕಿತವಿತ್ತೆನನ್ನೆಯಿಂ ಪೊರೆಯಿವಳ ಪನ್ನಂಗ ಶಯನಾ |ನಿನ್ನಂಥ ಕರುಣಾಳು | ಅನ್ಯರಾರಿಹರಯ್ಯಪನ್ನಗಾರಿಯ ವಾಹ | ಅನ್ನಂತ ಮಹಿಮಾ 4
ಪಾವನಾತ್ಮಕ ದೇವ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಶರ್ವವಂದ್ಯಾ ಭಾವದೊಳು ಮೈದೋರಿ | ಕಾವ್ಯದನೆ ಬಿನ್ನಪವಾನೀ ವೊಲಿದು ಸಲಿಸೊ ಗುರು | ಗೊವಿಂದ ವಿಠಲಾ 5