ಚಿತ್ತಾವೆ ಚಿಂತಿಸು ಶ್ರೀ ಹರಿಯನ್ನ | ಗುಣಗಣ ಮಣಿಯನ್ನ ಪ
ದ್ರುತ :ಕೃತ್ತಿವಾಸನುತ ಹೃತ್ಕಮಲಸ್ಥನ |ಸುಸ್ಥಿರ ಚಿತ್ತದಿ ನೀ ನಿಲಿಸುತ್ತ ಅ.ಪ.
ಪರ ಪರ ಪರ ಮಖಗಳೆಂದು 1
ಪರ ಪರ ಪರ ಗತಿಗಳಿಗೆಂದು 2
ಸೇವ್ಯ ಸೇವಕನೆಂದು | ಪ್ರೇರ್ಯ ಪ್ರೇರಕನೆಂದೂ |ಕಾರಣ ಕಾರ್ಯಗಳಲಿ ನಾರಾಯಣ |ಪೂರಣನಹುದೆಂದು ನೀ ನಮಿಸುತ್ತ 3
ಸೃಷ್ಟ್ಯಾದ್ಯಷ್ಟಕ ಕಾರಣ ಕರ್ತ | ಇಚ್ಛಾ ಮಾತ್ರ ಸಮರ್ಥಶಿಷ್ಟೇಷ್ಟ ಪುಷ್ಟ ಮಹಿಮನು ಎನುತ | ಹೃಷ್ಟ ನೀನಾಗೊ ಸತತಾ | ಕಷ್ಟ ಕ್ಲೇಶಹರ ಭೃತ್ಯಾಭೀಷ್ಟದ | ವೃಷ್ಟಿಕುಲೇಶನ ನಿಷ್ಠೆಯಲಿಂದ 4
ಉಂಬೂವ ಉಡುವ ಕ್ರಿಯೆಗಳನೆಲ್ಲ | ಹಂಬಲಿಸುವುದೆಲ್ಲಚುಂಬೀಸಿ ಮಕ್ಕಳ ಮುದ್ದಿಪುದೆಲ್ಲ | ಬಿಂಬನದೆಂಬ ಸೊಲ್ಲ |ಬಿಂಬನು ಗುರು ಗೋವಿಂದ ವಿಠಲ - ಸೂಕ್ಷ್ಮಾಂಬರದಲಿ ಮಾಡಿ ಮಾಡಿಪನೆಂದು 5